Select Your Language

Notifications

webdunia
webdunia
webdunia
webdunia

ಚಿತ್ರನಟರ ಮೇಲೆ ಐಟಿ ರೇಡ್: ಡಿಸಿಎಂ ಪರಮೇಶ್ವರ ಹೇಳಿದ್ದೇನು?

ಸ್ಯಾಂಡಲ್ವುಡ್
ಸ್ಯಾಂಡಲ್ ವುಡ್ ನಟರ ಹಾಗೂ ನಿರ್ಮಾಪಕರ ಮೇಲೆ ನಡೆದ ಐಡಿ ರೇಡ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಟ, ನಿರ್ಮಾಪಕರ ಮನೆ, ಕಚೇರಿ ಮೇಲೆ ಐಟಿ ರೇಡ್ ನಡೆದಿರುವುದಕ್ಕೆ ಡಿಸಿಎಂ ರಿಯಾಕ್ಷನ್ ನೀಡಿದ್ದು, ಯಾವ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂಬುದು ಗೊತ್ತಿಲ್ಲ. ಅವರು ತೆರಿಗೆಯನ್ನು ಕಟ್ಟಿಲ್ಲ ಅನ್ನೋ ಉದ್ದೇಶದಿಂದ ದಾಳಿ ನಡೆದಿದ್ದರೆ ಅದು ಸರಿ ಎಂದರು.

ಬೇರೆ ಉದ್ದೇಶದಿಂದ ದಾಳಿ ನಡೆಸಿದ್ದರೆ ಸರಿಯಲ್ಲ ಎಂದ ಅವರು, ಮೊದಲಿನಿಂದಲೂ ನಾವು ಹೇಳಿಕೊಂಡು‌ ಬಂದಿದ್ದೇವೆ. ಕಾಂಗ್ರೆಸ್ ನವರನ್ನು ಹಾಗೂ ಕಾಂಗ್ರೆಸ್ ಬೆಂಬಲಿಗರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು. ಕಾನೂನಾತ್ಮಕವಾಗಿ ದಾಳಿ ನಡೆಸಿದ್ದರೆ ನಮ್ಮದೇನು ತಕರಾರಿಲ್ಲ ಎಂದು ಹೇಳಿದರು.

ಅದನ್ನು ಹೊರತುಪಡಿಸಿ ದಾಳಿ ನಡೆಸಿದರೆ ತಪ್ಪು ಎಂದ ಉಪಮುಖ್ಯಮಂತ್ರಿ ಪರಮೇಶ್ವರ್, ಆದರೆ ಒಂದು ವರ್ಗಕ್ಕೆ ದಾಳಿ ಸೀಮಿತವಾಗಿರಬಾರದು. ಯಾರ ಸೂಚನೆ ಮೇಲೆ ದಾಳಿ ನಡೆದಿದೆ ಎಂದು ಗೊತ್ತಿಲ್ಲ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯಪ್ಪ ದೇಗುಲ: ಮಹಿಳೆಯರ ಪ್ರವೇಶಕ್ಕೆ ಖಂಡನೆ