Publish Date: Sun, 06 Jan 2019 (08:54 IST)
Updated Date: Sun, 06 Jan 2019 (08:56 IST)
ಬೆಂಗಳೂರು: ಸತತ ಎರಡು ದಿನ ಮನೆ ತುಂಬಾ ಓಡಾಡಿಕೊಂಡಿದ್ದ ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಯಿಂದ ಸುಸ್ತಾಗಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಕೆಜಿಎಫ್ ಗುಡ್ ನ್ಯೂಸ್ ಕೊಟ್ಟಿದೆ.
ಯಶಸ್ವೀ ಮೂರನೇ ವಾರಕ್ಕೆ ಕಾಲಿಟ್ಟಿರುವ ಕೆಜಿಎಫ್ ಗಳಿಕೆ ವಿಚಾರದಲ್ಲಿ 180 ಕೋಟಿ ರೂ. ದಾಟಿದ್ದು, ಇನ್ನೊಂದು ವಾರದಲ್ಲಿ 200 ಕೋಟಿ ಕ್ಲಬ್ ಗೆ ಸೇರುವ ನಿರೀಕ್ಷೆಯಿದೆ. ಇನ್ನು ಮೂರು ದಿನಕ್ಕೆ ಯಶ್ ಬರ್ತ್ ಡೇ ಇದ್ದು, ಆ ಸಂದರ್ಭದಲ್ಲಿ ಕೆಜಿಎಫ್ 200 ಕೋಟಿ ದಾಟುವ ನಿರೀಕ್ಷೆಯಿದೆ.
ಇನ್ನೊಂದೆಡೆ ಈ ಸೂಪರ್ ಹಿಟ್ ಸಿನಿಮಾ ಈಗ ದಕ್ಷಿಣ ಭಾರತದ ಆಲ್ ಟೈಮ್ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿದೆ. ಬಾಹುಬಲಿ 2 ಮೊದಲ ಸ್ಥಾನದಲ್ಲಿದ್ದು, ಕೆಜಿಎಫ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸಿನಿಮಾವಾಗಿದೆ. ಇದು ಕೇವಲ ಯಶ್ ಗೆ ಮಾತ್ರವಲ್ಲ, ಸ್ಯಾಂಡಲ್ ವುಡ್ ಗೂ ಹೆಮ್ಮೆಯ ಸಂಗತಿಯೇ ಸರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ