Publish Date: Fri, 04 Jan 2019 (15:38 IST)
Updated Date: Fri, 04 Jan 2019 (15:39 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟರ ಮನೆ ಮೇಲೆ ಈ ರೀತಿ ಐಟಿ ಅಧಿಕಾರಿಗಳು ಏಕಾಏಕಿ ಮುಗಿ ಬೀಳಲು ಕಾರಣವೇನು? ಐಟಿ ಅಧಿಕಾರಿಗಳಿಗೆ ಸ್ಟಾರ್ ನಟರ ಆದಾಯದ ಬಗ್ಗೆ ಸುಳಿವು ಕೊಟ್ಟವರಾರು ಗೊತ್ತೇ?
ಕೆಲವು ಸ್ಟಾರ್ ನಟರು ಮತ್ತು ನಿರ್ಮಾಪಕರನ್ನೇ ಗುರಿಯಾಗಿಟ್ಟುಕೊಂಡು ಏಕಾಏಕಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ವಿತರಕ ಜಯಣ್ಣ ಮನೆಯಲ್ಲಿ ಸಿಕ್ಕಿದ ಡೈರಿ ಕಾರಣ ಎನ್ನಲಾಗಿದೆ.
ಜಯಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಡೈರಿ ಸಿಕ್ಕಿತ್ತು. ಈ ಡೈರಿಯಲ್ಲಿ ಸ್ಟಾರ್ ನಟರ ಆದಾಯ, ಸಿನಿಮಾಗಳ ಮೇಲೆ ಮಾಡಲಾಗಿದ್ದ ಹೂಡಿಕೆ ಕುರಿತಾದ ಮಾಹಿತಿಯಿತ್ತು ಎನ್ನಲಾಗಿದೆ.
ಇದೇ ಸುಳಿವು ಇಟ್ಟುಕೊಂಡು ಐಟಿ ಅಧಿಕಾರಿಗಳು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಿರುವ ನಟರು ಮತ್ತು ನಿರ್ಮಾಪಕರನ್ನೇ ಕೇಂದ್ರವಾಗಿಟ್ಟುಕೊಂಡು ದಾಳಿ ಮಾಡಲಾಗಿದೆ ಎಂಬ ಸುದ್ದಿ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ