Select Your Language

Notifications

webdunia
webdunia
webdunia
webdunia

ಇನ್ನು ಮುಂದೆ ನಿಮ್ಮ ಮನೆ ಕಸಕ್ಕೂ ಬೀಳಲಿದೆ ಸುಂಕ

Garbage

Krishnaveni K

ಬೆಂಗಳೂರು , ಶುಕ್ರವಾರ, 14 ಮಾರ್ಚ್ 2025 (11:24 IST)
ಬೆಂಗಳೂರು: ಬೆಂಗಳೂರಿಗರಿಗೆ ಎಲ್ಲಾ ಬೆಲೆ ಏರಿಕೆ ನಡುವೆ ಕಸ ವಿಲೇವಾರಿಗೂ ಸುಂಕ ತೆರುವ ಪರಿಸ್ಥಿತಿ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಮನೆ ಕಸ ತ್ಯಾಜ್ಯ ವಿಲೇವಾರಿಗೆ ಸುಂಕ ವಿಧಿಸಲು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ನಿರ್ಧರಿಸಿದೆ.

ಈಗಾಗಲೇ ಪ್ರತೀ ಎರಡು ದಿನಕ್ಕೊಮ್ಮೆಯಾದರೂ ನಿಮ್ಮ ಮನೆ ಬಳಿ ಕಸ ವಿಲೇವಾರಿಯವರು ಬಂದು ಕಸ ಸಂಗ್ರಹಿಸಿಕೊಂಡು ಹೋಗುತ್ತಿದ್ದಾರೆ. ಇವರು ಮಾಸಿಕವಾಗಿ 20 ರಿಂದ 30 ರೂ. ಶುಲ್ಕ ಕೇಳುತ್ತಿದ್ದಾರೆ.

ಆದರೆ ಇನ್ನು ಮುಂದೆ ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯೇ ವಾರ್ಷಿಕವಾಗಿ 400 ರೂ.ಗಳಷ್ಟು ಸುಂಕ ವಿಧಿಸಿ ವರ್ಷಕ್ಕೆ 600 ಕೋಟಿ ರೂ. ಆದಾಯ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. 600 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ. ವರ್ಷಕ್ಕೆ 120 ರೂ. ಸುಂಕ ತೆರಬೇಕು.

600 ರಿಂದ 1000 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 50 ರೂ. 1000 ದಿಂದ 2000 ಚದರ ಅಡಿ ಇರುವ ಕಟ್ಟಡಗಳು ತಿಂಗಳಿಗೆ 100 ರೂ. 2000 ದಿಂದ 3000 ವರೆಗಿನ ಚದರ ಅಡಿ ಕಟ್ಟಡದವರು ತಿಂಗಳಿಗೆ 150 ರೂ., 3000 ದಿಂದ 4000 ಚದರ ಅಡಿ ವಿಸ್ತೀರ್ಣದ ಕಟ್ಟಡಗಳು ತಿಂಗಳಿಗೆ 200 ರೂ., 4000 ಚದರ ಅಡಿ ಮೇಲ್ಪಟ್ಟು ಕಟ್ಟಡದವರು ತಿಂಗಳಿಗೆ 400 ರೂ. ಶುಲ್ಕ ವಿಧಿಸಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಈಗ ಬಂಪರ್: ಇಂದಿನ ಮಾರುಕಟ್ಟೆ ದರ ಹೇಗಿದೆ ಡೀಟೈಲ್ಸ್