Select Your Language

Notifications

webdunia
webdunia
webdunia
webdunia

ಅನುಮಾನಾಸ್ಪದ ಯುವಕ, ಯುವತಿ ವಶಕ್ಕೆ

Suspicious young man
ಶಿವಮೊಗ್ಗ , ಮಂಗಳವಾರ, 20 ಡಿಸೆಂಬರ್ 2022 (16:47 IST)
ಶಿವಮೊಗ್ಗ ನಗರದ ಹಲವೆಡೆ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಯುವಕ ಹಾಗೂ ಬುರ್ಖಾ ಹಾಕಿಕೊಂಡಿದ್ದ ಯುವತಿಯನ್ನು ಪೊಲೀಸರು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ. ನಾವು ಕಾಶ್ಮೀರದಿಂದ ಬಂದಿದ್ದೇವೆ, ನಮಗೆ ಸಹಾಯ ಮಾಡಿ ಎಂದುಕೊಂಡು ಯುವಕ ಹಾಗೂ ಯುವತಿ ಮನೆ ಮನೆಗೆ ತೆರಳಿ ಬೇಡುತ್ತಿದ್ದರು. ಶಿವಮೊಗ್ಗದ ಇಲಿಯಾಸ್ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿಕೊಂಡಿದ್ದ ಯುವಕ ಹಾಗೂ ಯುವತಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಹುಲಿ ಸಾವು