20 ತಿಂಗಳು ಮಗುವಿನ ತಲೆ, ದೇಹಕ್ಕೆ ಹೊಂದಿಕೊಳ್ಳುವ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ.
ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಸಾಗರ್ ಆಸ್ಪತ್ರೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದೆ.
ತೇಜಸ್ ಎಂಬ 20 ತಿಂಗಳ ಮಗು ಒಂದು ವರ್ಷದ ಹಿಂದೆಯೇ ಅಥ್ಲಾಂಟೋ ಆಕ್ಸಿಯಲ್ ಡಿಸ್ಕ್ಲೊಸನ್ ಎಂಬ ರೋಗಕ್ಕೆ ತುತ್ತಾಗಿದ್ದನು. ಇದೊಂದು ಅಪರೂಪದ ರೋಗ. ತೇಜಸ್ ಹುಟ್ಟಿದ 5 ತಿಂಗಳ ನಂತರ ತಲೆ ಹಾಗೂ ದೇಹದ ಭಾಗದಲ್ಲಿ ಸಮಸ್ಯೆ ಕಂಡು ಬಂದಿತು. ಕೂಡಲೇ ಆತನ ತಂದೆ, ತಾಯಿಗಳು ಸಾಗರ್ ಆಸ್ಪತ್ರೆಯ ಡಾ. ಮುರಳಿ ಮೋಹನ್ ಅವರನ್ನು ಸಂಪರ್ಕಿಸಿ ಮಗುವಿನ ಸಮಸ್ಯೆ ಬಗ್ಗೆ ವಿವರಿಸಿದರು.
ಸಾಗರ್ ಆಸ್ಪತ್ರೆ ನರ ಶಸ್ತ್ರಚಿಕಿತ್ಸೆಯ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಮಗು ಗುಣಮುಖರಾಗಲು ಸಾಧ್ಯವಾಯಿತು. ಇದೊಂದು ವಿಚಿತ್ರವಾದ ರೋಗವಾಗಿದೆ. ನಮ್ಮ ಆಸ್ಪತ್ರೆಯ ವೈದ್ಯರ ತಂಡ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಉಳಿಸುವಲ್ಲಿ ಯಶ ಕಂಡಿದೆ ಎಂದು ಸುದ್ಧಿಗೋಷ್ಠಿಯಲ್ಲಿ ಡಾ. ಮುರುಳಿಮೋಹನ್ ಹೇಳಿದ್ದಾರೆ.