ಶಾಲೆಗಳಲ್ಲಿ ಏಕೆ ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಹಿರಿಯ ವಕೀಲ ಕೆಎಂ ನಟರಾಜ್ ಮಹತ್ವದ ಉತ್ತರ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳ ವಿಷಯಕ್ಕೆ ಬಂದರೆ, ಸಾರ್ವಜನಿಕರು ಒಂದಾಗಬಹುದು. ಸಾಂವಿಧಾನಿಕ ನೀತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿರ್ಬಂಧಗಳನ್ನು ಈ ವೇಳೆ ಒಪ್ಪಿಕೊಳ್ಳಬೇಕಾಗುತ್ತದೆ. ನಾಳೆ ಒಬ್ಬ ವ್ಯಕ್ತಿ ಬರುತ್ತಾರೆ. ಹಿಜಾಬ್ ನನ್ನ ಸಂಪೂರ್ಣ ಹಕ್ಕು. ಹಿಜಾಬ್ ಧರಿಸಿಕೊಂಡೇ, ನನ್ನ ಮುಖವನ್ನು ತೋರಿಸದೆಯೇ ಏರ್‌ಪೋರ್ಟ್‌ಗೆ ಹೋಗಬೇಕು ಎಂದು ಹೇಳುತ್ತಾನೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆಯೇ? ಆಗ ತ್ಯಾಗವನ್ನು ಧಾರ್ಮಿಕ ಹಕ್ಕು ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ನಾಳೆ ಇನ್ನೊಬ್ಬ ಹಿಂದು ವ್ಯಕ್ತಿ ಬಂದು, ಕೋರ್ಟ್‌ನ ಹಾಲ್‌ನಲ್ಲಿ ಇಂಡಿಯಾ ಗೇಟ್‌ನಲ್ಲಿ ಹೋಮವನ್ನು ಮಾಡುತ್ತೇನೆ ಎನ್ನುತ್ತಾನೆ. ಆಗ ಏನು ಹೇಳಲು ಸಾಧ್ಯ ಎಂದು ವಾದ ಮಂಡಿಸಿದ್ದಾರೆ. ಎಲ್ಲಾ ಧಾರ್ಮಿಕ ಹಕ್ಕುಗಳನ್ನು ಸಮತೋಲನಗೊಳಿಸಬೇಕು. ನನಗೆ ಸಂಪೂರ್ಣ ಹಕ್ಕಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದರು.
ಶಾಲೆಯಲ್ಲಿ ಏಕರೂಪತೆ ಕಾಪಾಡುವುದು ಸರ್ಕಾರದ ಉದ್ದೇಶ. ಹಿಜಾಬ್ ಅನ್ನು ನಿಷೇಧಿಸಲಾಗಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆಯನ್ನು ನಿಷೇಧಿಸಿಲ್ಲ ಎನ್ನುವುದನ್ನು ಕೋರ್ಟ್‌ನ ಗಮನಕ್ಕೆ ಮತ್ತೆ ತರುತ್ತೇನೆ ಎಂದು ಹೇಳಿದರು. ಶಾಲೆಯು ಸುರಕ್ಷಿತ ಸ್ಥಳ. ಅಲ್ಲಿ ಖಂಡಿತವಾಗಿ ಹಿಜಾಬ್‌ನ ಅಗತ್ಯವಿರುವುದಿಲ್ಲ. ಧರ್ಮದ ಆಧಾರದ ಮೇಲೆ ವರ್ಗೀಕರಣಕ್ಕೆ ನಮ್ಮ ಸಮ್ಮತಿ ಇಲ್ಲ. ಶಾಲೆ ಒಂದು ಸುರಕ್ಷಿತ ಸಂಸ್ಥೆ, ಸುರಕ್ಷಿತ ಸಂಸ್ಥೆಗೆ ಬಂದಾಗ ಎಲ್ಲರೂ ಸಮವಸ್ತ್ರದೊಂದಿಗೆ ಬರಬೇಕು.