ಸಿಎಂಗೆ ಸಪೋರ್ಟ ಮಾಡಿದ ಪುಟಾಣಿ ಹುಡುಗಿ ವಿಡಿಯೋ ವೈರಲ್!

Webdunia
ಮಂಗಳವಾರ, 17 ಜುಲೈ 2018 (15:02 IST)
ಕೊಡಗಿನ ಎಮ್ಮೆಮಾಡುವಿನಲ್ಲಿ ಯುವಕ ಸಿಎಂ ವಿರುದ್ಧ ಹೇಳಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆ ಹಾಸನದಲ್ಲಿ ಪುಟಾಣಿ ಹುಡುಗಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಸಿಎಂಗೆ ನಾವಿದ್ದೇವೆ ಅಳಬೇಡಿ. ನಿಮ್ಮ ಪರವಾಗಿದ್ದೇವೆ ಎಂದು ಹೇಳಿರುವ ಬಾಲಕಿಯ ವಿಡಿಯೋ ವೈರಲ್ ಆಗಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಳಲಿಗ್ರಾಮದ ಬಾಲಕಿಯ ವಿಡಿಯೋ ಇದಾಗಿದೆ. ಎಲ್ಲಾ ವಿಷವನ್ನ ನಾನೇ ಕುಡಿದು ವಿಷಕಂಠನಾಗಿ ಬದುಕುತ್ತಿದ್ದೇನೆ ಎಂದು ಸಿ.ಎಂ. ಹೇಳಿದ್ದರು. ಸಿಎಂ ಭಾವುಕಾರಗಿ ಕಣ್ಣೀರು ಹಾಕಿದ ಘಟನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಿ.ಎಂ. ತವರಿನ ಪುಟಾಣಿಯಿಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸಾಂತ್ವಾನ ಹೇಳಲಾಗಿದೆ. ನೀವು ಮಾಡಿರುವ ಸಾಲಮನ್ನಾ ನಮಗೆ ಬೇಡ ನಮಗೆ ಹೆಚ್ಚು ಮಳೆಯಾಗಿದೆ, ನೆಲ ಹಸಿರಾಗಿದೆ. ಉತ್ತಮ ಬೆಳೆಯಾಗುತ್ತಿದೆ ಎಂದು ಪುಟ್ಟ ಬಾಲಕಿ ಹೇಳಿದ್ದಾಳೆ.  ನೀವು ಸಿಎಂ ಆದ ಬಳಿಕ ಸಾಕಷ್ಟು ಮಳೆಯಾಗಿ ಕೆರೆಕಟ್ಟೆಗಳು ತುಂಬಿವೆ. ನಮ್ಮ ಗ್ರಾಮಕ್ಕೆ ಬನ್ನಿ ಎಂದಿರುವ ಪುಟಾಣಿ.

ಮುಖ್ಯಮಂತ್ರಿ ಕುಮಾರಸ್ವಾಮಿಗಳೇ ಒಮ್ಮೆ ನಮ್ಮೂರಿಗೆ ಬಂದು ನೋಡಿ ನಾನು ಹುಟ್ಟಿದಾಗಿನಿಂದ ಮಳೆಯೇ ಆಗಿರಲಿಲ್ಲ. ಕೆರೆಗಳನ್ನು ತುಂಬಿದ್ದೇ ನೋಡಿರಲಿಲ್ಲ, ಆದರೀಗ ಎಲ್ಲಾ ಸುಭೀಕ್ಷವಾಗಿದೆ ಎಂದಿದ್ದಾಳೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

ಮುಂದಿನ ಸುದ್ದಿ
Show comments