Select Your Language

Notifications

webdunia
webdunia
webdunia
webdunia

ಸಂಸದೆ ಸುಮಲತಾಗೆ ಎದುರಾಗಿದೆ ಸವಾಲು

ಸಂಸದೆ ಸುಮಲತಾಗೆ  ಎದುರಾಗಿದೆ ಸವಾಲು
ಮಂಡ್ಯ , ಭಾನುವಾರ, 26 ಮೇ 2019 (12:18 IST)
ಮಂಡ್ಯ: ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಅವರಿಗೆ  ಈಗ ಸವಾಲೊಂದು ಎದುರಾಗಿದೆ. ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ರೈತರ ಬೆಳೆಗಳಿಗೆ ನೀರು ಬಿಡಿಸುವ ಜವಾಬ್ದಾರಿಯನ್ನು ಸುಮಲತಾರಿಗೆ ವಹಿಸಿದ್ದಾರೆ.

 

ಜಿಲ್ಲೆಯ ರೈತರ ಬೆಳೆಗಳು ಒಣಗುತ್ತಿದ್ದು, ಕೆಆರ್ ಎಸ್‍ನಿಂದ ನೀರು ಬಿಡಬೇಕೆಂಬ ಒತ್ತಾಯ ಕೇಳಿ ಬಂದಿದ್ದ ಹಿನ್ನೆಲೆ  ಇದರ ಕುರಿತು ಮಾತನಾಡಿದ ರವೀಂದ್ರ ಶ್ರೀಕಂಠಯ್ಯ ಈ ಲೋಕಸಭಾ ಚುನಾವಣೆ ಅನುಕಂಪದ ಆಧಾರದಲ್ಲಿ ಫಲ ಪಡೆದಿದೆ. ಸುಮಲತಾ ಅವರು ಬರೀ ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿಲ್ಲ. ಅವರು ಈಗ ನಮ್ಮ ಜಿಲ್ಲೆಯ ಸಂಸದೆಯಾಗಿರುವ ಸುಮಲತಾರನ್ನು ಅಭಿನಂದಿಸುತ್ತೇನೆ. ನಮ್ಮ ಜಿಲ್ಲೆಯ ನಾಲೆಗಳಿಗೆ ನೀರು ಹರಿಸುವ ವಿಷಯಲ್ಲಿ ನಮಗೆ ಸಪೋರ್ಟ್ ಸಿಕ್ಕಂತೆ ಆಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ, ಹೇಳಿದ್ದರು.


ನೀರು ನಿರ್ವಹಣಾ ಮಂಡಳಿ ಕೇಂದ್ರದ ಸುಪರ್ದಿಯಲ್ಲಿದ್ದು, ಸುಮಲತಾ ಅವರು ಸಂಸದರಾಗಿರುವದರಿಂದ ಜಿಲ್ಲೆಯ ಜನರಿಗೆ ಕೇಳಿದಾಗ ನೀರು ಬಿಡಿಸಿಕೊಡುತ್ತಾರೆ. ಇದರಿಂದ ಜಿಲ್ಲೆಯ ಜನರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಮದ್ಯ ಸೇವಿಸಿ ರಂಪಾಟ ಮಾಡಿದ್ದು ಸುಳ್ಳು ಎಂದ ಸಿಎಂ