Select Your Language

Notifications

webdunia
webdunia
webdunia
webdunia

ಸುಮಲತಾ ಅಂಬರೀಶ್ ಗೆ ಮತ್ತೆ ನಕಲಿಗಳ ಕಾಟ! ಸದ್ಯದಲ್ಲೇ ಜೈಲು ಮಾರ್ಗ ತೋರಿಸ್ತೀನಿ ಎಂದ ಸಂಸದೆ

ಸುಮಲತಾ ಅಂಬರೀಶ್ ಗೆ ಮತ್ತೆ ನಕಲಿಗಳ ಕಾಟ! ಸದ್ಯದಲ್ಲೇ ಜೈಲು ಮಾರ್ಗ ತೋರಿಸ್ತೀನಿ ಎಂದ ಸಂಸದೆ
ಮಂಡ್ಯ , ಶುಕ್ರವಾರ, 6 ಸೆಪ್ಟಂಬರ್ 2019 (11:00 IST)
ಮಂಡ್ಯ: ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ಇಲ್ಲ ಸಲ್ಲದ ಸ್ಟೇಟಸ್ ಹಾಕಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮತ್ತೆ ಕಿಡಿಗೇಡಿಗಳು ಶುರುಮಾಡಿಕೊಂಡಿದ್ದಾರೆ.


ಹಿಂದೊಮ್ಮೆ ಇದೇ ರೀತಿ ಸುಮಲತಾ ಈ ರೀತಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಪಪ್ರಚಾರ ಮಾಡಲು ಯತ್ನಿಸುವವರ ವಿರುದ್ಧ ಎಚ್ಚರಿಕೆ ನೀಡಿದ್ದರು. ಅಲ್ಲದೆ, ತಮ್ಮ  ಅಧಿಕೃತ ಟ್ವಿಟರ್ ಖಾತೆ ಮತ್ತು ಫೇಸ್ ಬುಕ್ ಖಾತೆ ನೀಲಿ ಕಲರ್ ನಲ್ಲಿ ಟಿಕ್ ಮಾರ್ಕ್ ಮಾಡಿದ್ದು ಮಾತ್ರ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದರು.

ಈಗ ಡಿಕೆ ಶಿವಕುಮಾರ್ ಬಂಧನದ ಬಗ್ಗೆ ನ್ಯಾಯದ ಮುಂದೆ ಎಲ್ಲರೂ ಒಂದೇ, ಅವರವರು ಮಾಡಿದ್ದನ್ನು ಅವರವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದು ಸರಿಯಲ್ಲ ಎಂಧು ನಕಲಿ ಖಾತೆಯಿಂದ ಕಿಡಿಗೇಡಿಯೊಬ್ಬ ಸುಮಲತಾ ಹೇಳಿದಂತೆ ಸ್ಟೇಟಸ್ ಬರೆದಿದ್ದಾನೆ.

ಇದು ಸಂಸದೆ ಸುಮಲತಾ ಗಮನಕ್ಕೆ ಬಂದಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ನಕಲಿ ಖಾತೆದಾರನ ಬಗ್ಗೆ ಎಚ್ಚರವಾಗಿರುವಂತೆ ಹೇಳಿದ್ದಾರಲ್ಲದೆ, ಈ ವ್ಯಕ್ತಿಗೆ ಸದ್ಯದಲ್ಲೇ ಜೈಲು ಮಾರ್ಗ ತೋರುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ನಿವಾಸದ ರಸ್ತೆಗೆ ಮಾಧ್ಯಮದವರಿಗಿಲ್ಲ ಎಂಟ್ರಿ