ಸಿಎಂ ನಿವಾಸದ ರಸ್ತೆಗೆ ಮಾಧ್ಯಮದವರಿಗಿಲ್ಲ ಎಂಟ್ರಿ

ಶುಕ್ರವಾರ, 6 ಸೆಪ್ಟಂಬರ್ 2019 (10:50 IST)
ಬೆಂಗಳೂರು : ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದ ರಸ್ತೆಗೆ ಮಾಧ್ಯಮ ಪ್ರತಿನಿಧಿಗಳು ಬರದಂತೆ ನಿರ್ಬಂಧ ಹೇರಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದವರೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಬಿಡದಂತೆ ನಿರ್ಬಂಧ ಹೇರಲು ನಿರ್ಧರಿಸಿದ ಸಿಎಂ ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಆದರೆ ಯಾವ ಕಾರಣಕ್ಕೆ ಎಂಬ ಮಾಹಿತಿ ತಿಳಿದುಬಂದಿಲ್ಲ.


ಸಿಎಂ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದಾಗಲೂ ಈ ರೀತಿ ನಿರ್ಬಂಧ ಹೇರದೆ, ಇದೀಗ ಮಾಧ್ಯಮದವರಿಗೆ ನಿರ್ಬಂಧ ಹೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಪೊಲೀಸರು ವಸೂಲಿ ಮಾಡಿದ ಹಣವೆಷ್ಟು ಗೊತ್ತಾ?