ಮಂಗಳೂರು: ಕೆಲ ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ತೆರಳಿದ್ದ ನನ್ನ ಮಗಳು ನಾಪತ್ತೆಯಾಗಿದ್ದಳು ಎಂದು ಎಸ್‌ಐಟಿ ಬಳಿ ಹೇಳಿಕೆ ನೀಡಿದ್ದ ಸುಜಾತಾ ಭಟ್‌ಗೆ ಇದೀಗ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಅನನ್ಯಾ ಭಟ್ ನಾಪತ್ತೆ ವಿಚಾರದಲ್ಲಿ ಮಾಧ್ಯಮದಲ್ಲಿ ದಿನಕ್ಕೊಂದು ವಿಚಾರಗಳು ಬಯಲಾಗುತ್ತಿದ್ದು ಇದೀಗ ಈ ಸಂಬಂಧ ಎಸ್‌ಐಟಿ ಮುಂದೇ ವಿಚಾರಣೆಗೆ ಹಾಜರಾಗುವಂತೆ ಸುಜಾತಾ ಭಟ್‌ಗೆ ನೋಟಿಸ್ ನೀಡಲಾಗಿದೆ.
ಯಾರದ್ದೋ ಮನೆಯ ಸೊಸೆ ಫೋಟೋ ತೋರಿಸಿ ತಮ್ಮ ಮಗಳು ಎನ್ನುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಸಂತಾ ಎಂಬುವವರ ಸಹೋದರ ನನ್ನ ತಂಗಿ ಫೋಟೋ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ್ರು. ಇದೀಗ ಅನನ್ಯಾ ಭಟ್ ಅವರ ನಾಪತ್ತೆ ವಿಚಾರಣೆ ಬಗ್ಗೆ ತಿಳಿದುಕೊಳ್ಳಲು ಎಸ್‌ಐಟಿ ಮುಂದಾಗಿದೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದೆ.
ಬೆಳ್ತಂಗಡಿ ಕಚೇರಿ ಸಿಬ್ಬಂದಿ ಬೆಂಗಳೂರಿಗೆ ಬಂದು ನೋಟಿಸ್ ಜಾರಿಮಾಡಿದ್ದಾರೆ. ನೋಟೀಸ್ ಸ್ವೀಕರಿಸಿ ಶೀಘ್ರದಲ್ಲೇ ವಿಚಾರಣೆಗೆ ಬರೋದಾಗಿ ಸುಜಾತ ಭಟ್ ತಿಳಿಸಿದ್ದಾರೆ.
ಈಗಾಗಲೇ ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಶಿವಮೊಗ್ಗ, ಬೆಂಗಳೂರು, ಉಡುಪಿಯಲ್ಲಿ ದಾಖಲೆ ಸಂಗ್ರಹಿಸಿದೆ.
ಈ ಮಾಹಿತಿಗಳ ಆಧಾರದಲ್ಲಿ ಸುಜಾತ್ ಭಟ್‌ರನ್ನ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ವಿಚಾರಣೆ ಬಳಿಕ ಸುಜಾತ ಭಟ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 0