ಬೆಂಗಳೂರು: ಧರ್ಮಸ್ಥಳದ ಬಗ್ಗೆ ಎಐ ವಿಡಿಯೋ ಮುಖಾಂತರ ಅಪಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್ ಸಮೀರ್ ಬಂಧನ ಭೀತಿ ಹಿನ್ನೆಲೆ, ಇದೀಗ ಬೆಂಗಳೂರು ನಗರವನ್ನು ತೊರೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಎರಡು ದಿನದಿಂದ ಪೊಲೀಸರು ಹುಡುಕುತ್ತಿದ್ದಾರೆಂದು ತಿಳಿದು ಮೊಬೈಲ್ ಅನ್ನು ಬೆಂಗಳೂರಿನ ಮನೆಯಲ್ಲಿ ಬಿಟ್ಟು, ನಾಪತ್ತೆಯಾಗಿದ್ದಾನೆ.
ನಿನ್ನೆ ಪೊಲೀಸರು ಮೊಬೈಲ್ ಲೋಕೇಶನ್ ಆಧರಿಸಿ ಹುಡುಕಾಟ ನಡೆಸಿದಾಗ ಬೆಂಗಳೂರಿನಲ್ಲಿ ಸುತ್ತಾ ಲೋಕೇಷನ್ ತೋರಿಸಿತ್ತು. ಸಂಜೆ ವೇಳೆ ಜಿಗಿಣಿ ಬಳಿ ಲೋಕೇಶನ್ ತೀರಿಸಿದ್ದರಿಂದ ಅದನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಹೋದಾಗ ಆತ ಮೊಬೈಲ್ ಬಿಟ್ಟು ಮಂಗಳೂರಿನ ಕಡೆ ಪ್ರಯಾಣ ಬೆಳೆಸಿರುವುದಾಗಿ ಆತನ ಮನೆಯವರು ಹೇಳಿದ್ದಾರೆ.
ಒಟ್ಟಾರೆ ಧರ್ಮಸ್ಥಳ ಪ್ರಕರಣದಲ್ಲಿ ಬಂಧನ ಭೀತಿಯಿರುವುದರಿಂದ ಸಮೀರ್ ಇದೀಗ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನೂ ಬಂಧನದ ಸಾಧ್ಯತೆಯಿಂದ 2ದಿನಗಳ ಹಿಂದೆಯೇ ತನ್ನ ವಕೀಲರ ಮುಖಾಂತರ ಸಮೀರ್ ನಿರೀಕ್ಷಾ ಜಾಮೀನು ಅರ್ಜಿಯನ್ನ ಸಲ್ಲಿಸಿದ್ದ. ಅದರ ವಿಚಾರಣೆ ಇನ್ನೇನು ನಡೆದು, ತೀರ್ಪು ಹೊರಬೀಳಲಿದೆ.