Publish Date: Tue, 03 Mar 2026 (20:47 IST)
Updated Date: Tue, 03 Mar 2026 (20:50 IST)
ಬೆಂಗಳೂರು: ಸಿಎಂ ಕುರ್ಚಿ ಗುದ್ದಾಟದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಮಾರ್ಚ್ 10ರಂದು ಎಲ್ಲ ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಆಯೋಜನೆ ಮಾಡಿದ್ದು, ಡಿಕೆಶಿ ಈ ನಡೆ ಭಾರೀ ಕುತೂಹಲವನ್ನು ಮೂಡಿಸಿದೆ.
ಪವರ್ ಶೇರಿಂಗ್ ಜಟಾಪಟಿ, ಎಲ್ಲಾ ರಾಜಕೀಯ ಗೊಂದಲಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಡಿನ್ನರ್ ಆಯೋಜನೆ ಹಿಂದಿರುವ ಉದ್ದೇಶ ಭಾರೀ ಕುತೂಹಲ ಮೂಡಿಸಿದೆ.
ಈ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ ಸಚಿವರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಕೆಲವು ಹಿರಿಯ ನಾಯಕರಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡಿಕೆಶಿ ಪ್ರತಿಕ್ರಿಯಿಸಿ, 6 ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ಗೆ ಹೊರ ರಕ್ತ ಬರಬೇಕು. ಹೊಸಬರಿಗೆ ಅವಕಾಶ ಸಿಗಬೇಕು. ನಾನು ಸ್ಟ್ರೀಟ್ ಫೈಟರ್ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನಬ ಬಿಟ್ಟು ಕೊಡುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ.