Select Your Language

Notifications

webdunia
webdunia
webdunia
webdunia

ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಅರ್ಚಕ ಆತ್ಮಹತ್ಯೆ

webdunia
bangalore , ಶುಕ್ರವಾರ, 9 ಜುಲೈ 2021 (18:28 IST)
ಪತ್ನಿ ತೊರೆದು ಹೋಗಿದ್ದರಿಂದ ನೊಂದ ಅರ್ಚಕ ತಾನು ದಿನನಿತ್ಯ ಪೂಜಿಸುತ್ತಿದ್ದ ದೇವಸ್ಥಾನದ ದೇವಿಯ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿ ಪಟ್ಟಣದ ಲಕ್ಷ್ಮೀ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಅಶೋಕ ಪೂಜೇರಿ (36) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 
ದಿನನಿತ್ಯ ಪತ್ನಿ ಜೊತೆಗೆ ಜಗಳವಾಡುತ್ತಿದ್ದ ಅಶೋಕನಿಂದ ಬೇಸತ್ತ ಪತ್ನಿ ನಾಲ್ಕೈದು ದಿನಗಳ ಹಿಂದೆ ಮನೆ  ಬಿಟ್ಟು ತವರು ಮನೆಗೆ ಹೋಗಿದ್ದಳು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಶೋಕ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಅರ್ಚಕನಿಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಸ್ಥಳಕ್ಕೆ ಹುಕ್ಕೇರಿ ಪಿ ಎಸ್ ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದುಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಕೈ ಕೊಟ್ಟು ಎಎಪಿ ಸೇರಲಿದ್ದಾರಾ ಕಮಲ ಶಾಸಕ....!!!