Select Your Language

Notifications

webdunia
webdunia
webdunia
webdunia

ಕೊರೊನಾ ಮೂರನೇ ಸೂಚನೆ ಹಿನ್ನೆಲೆಯಲ್ಲಿ ಹಣ ಬಿಡುಗಡೆ

ಕೊರೊನಾ ಮೂರನೇ ಸೂಚನೆ ಹಿನ್ನೆಲೆಯಲ್ಲಿ ಹಣ ಬಿಡುಗಡೆ
bangalore , ಶುಕ್ರವಾರ, 9 ಜುಲೈ 2021 (14:21 IST)
ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕೇಂದ್ರ ಸರಕಾರ ಕೋವಿಡ್-19 ನಿಯಂತ್ರಣಕ್ಕಾಗಿ 23,000 ಕೋಟಿ ತುರ್ತು ಪ್ಯಾಕೇಜ್ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ಸಹದ್ಯೋಗಿಗಳ ಜೊತೆ ಮಾತುಕತೆ ನಡೆಸಿದ ಬೆನ್ನಲ್ಲೇ ಕೋವಿಡ್ ನಿಯಂತ್ರಣಕ್ಕಾಗಿ 23 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಲಾಗಿದೆ.
736 ಜಿಲ್ಲೆಗಳಲ್ಲಿ 20 ಸಾವಿರ ಹೊಸ ಐಸಿಯು ಯೂನಿಟ್ ಸ್ಥಾಪನೆ, ಔಷಧ ಪೂರೈಕೆಗೆ ಈ ಪ್ಯಾಕೇಜ್ ಬಳಕೆಯಾಗಲಿದೆ. 23 ಸಾವಿರ ಕೋಟಿ ರೂ.ನಲ್ಲಿ 15 ಸಾವಿರ ಕೋಟಿ ರೂ. ಕೇಂದ್ರ ಹಾಗೂ 8000 ಕೋಟಿ ರೂ. ರಾಜ್ಯ ಸರಕಾರಗಳ ಪಾಲಿದೆ. ಈ ಅನುದಾನವನ್ನು ಮುಂದಿನ 9 ತಿಂಗಳಲ್ಲಿ ಬಳಕೆ ಮಾಡಲಾಗುವುದು ಎಂದು ನೂತನ ಆರೋಗ್ಯ ಸಚಿವ ಮನ್ಸೂಖ್ ಮಾಂಡಿವ್ಯ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್-ವೀಡಿಯೋ ಸಂವಾದ