Select Your Language

Notifications

webdunia
webdunia
webdunia
webdunia

ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ,ಇ ಪೇಮೆಂಟ್ ಜಾರಿ

ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ,ಇ ಪೇಮೆಂಟ್ ಜಾರಿ
bangalore , ಭಾನುವಾರ, 11 ಜುಲೈ 2021 (19:30 IST)
ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ,ಇ ಪೇಮೆಂಟ್ ಜಾರಿಗೆ ತಂದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ  ಸರ್ಕಾರ.ಕಂದಾಯ ಇಲಾಖೆ ಯ ಮಂತ್ರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ‌‌‌.
ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿ ಗಳಲ್ಲಿ  ಇನ್ನು‌ಮುಂದೆ ನೀವು ನಿಮ್ಮ ಆಸ್ತಿ.ನೊಂದಾಣಿ ಮಾಡಿ ಕೊಳ್ಳಬೇಕಾದ್ರೆ  ಏಳು‌ಕೆರೆ ನೀರು ಕುಡಿದಿರಬೇಕು.ಅಷ್ಟರ ಮಟ್ಟಿಗೆ  ನೆಟ್ ಬ್ಯಾಂಕಿಂಗ್ ಸಿಸ್ಟಮ್ ನಲ್ಲಿ‌ತೊಂದರೆಯಾಗುತ್ತಿದೆ. ಈ‌ಪೇಮೆಂಟ್ ನಲ್ಲಿ ಶುಲ್ಕ‌ಕಟ್ಟಬೇಕು ಅದಕ್ಕೂ‌ಮೊದಲು ಆಯಾ ಕಚೇರಿಗಳಲ್ಲಿ‌ ಕೆ 2 ಚಲನ್ ನನ್ನು ತುಂಬಿ ಬ್ಯಾಂಕಿಗೆ ಬಂದು ಶುಲ್ಕ ಕಟ್ಟಬೇಕು.ಸರದಿ ಸಾಲಿನಲ್ಲಿ ನಿಲ್ಲಬೇಕು.ಈ ವ್ಯವಸ್ಥೆ ಯ ವಿರುದ್ದ ನಾಗರಿಕರು ರಾಜ್ ನ್ಯೂಸ್ ಗೆ ಹೇಳಿದ್ದಾರೆ.  ಇ.ಸಿ.ಕೊಳ್ಳಲು 50 ರೂಪಾಯಿ ಪೀಜ್. ಅದಕ್ಕೂ .ನೆಟ್ ಬ್ಯಾಂಕಿಂಗ್ ಮೂಲಕವೇ ಹೋಗಬೇಕು. ಒಂದು ವಾರದೊಳಗೆ ನೊಂದಾಣಿ  ಪ್ರಕ್ರಿಯೇ ಮುಗಿಯಬೇಕು. ಒಂದು‌ವೇಳೆ‌ ಕಣ್ಣು ತಪ್ಪಿನಿಂದ  ರಾಜ್ಯ ಮುದ್ರಾಂಕ ಇಲಾಖೆಯ ಹೆಸರಿನಲ್ಲಿ ಹಣ ಕಟ್ಟಿದ್ದರೆ  ಬೇರೆ ಯಾವ ಕಡೆ ನೊಂದಾಣಿಯಾಗಲ್ಲ. ಆಹಣ ವಾಪಸ್ಸು ಪಡೆದುಕೊಳ್ಳುವ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಇದೇ ರೀತಿ ಹತ್ತಾರು ಪ್ರಕರಣಗಳು ನಡೆದಿದೆ. ಹಣ ಹಿಂತಿರುಗಿಸುವಂತೆ ಸಬ್ ರಿಜಿಸ್ಟಾರ್ ಒಬ್ಬರು ಸರ್ಕಾರಕ್ಕೆ ಪತ್ರ‌ಬರೆದಿದ್ದಾರೆ.ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ಯಾಕೆ ಶಿಕ್ಷೆ ಎಂದು ಸಾರ್ವಜನಿಕರು ಸರ್ಕಾರವನ್ನ ಕೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ 4000 ಸಾವಿರ ಮೀರುತ್ತಿರಿವ ಕಸದ ಟನ್ ಕಸ