Select Your Language

Notifications

webdunia
webdunia
webdunia
webdunia

ಅಕ್ಷರ ಯಜ್ಙ ವತಿಯಿಂದ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸಕ್ತಗಳ ಹಂಚಿಕೆ

ಅಕ್ಷರ ಯಜ್ಙ ವತಿಯಿಂದ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸಕ್ತಗಳ ಹಂಚಿಕೆ
bangalore , ಭಾನುವಾರ, 11 ಜುಲೈ 2021 (19:00 IST)
ಬಡ ಮಕ್ಕಳ ಶಿಕ್ಷಣ ಅನುಕೂಲಕ್ಕಾಗಿ  ಶ್ರೀ ರಾಘವೇಂದ್ರ ಅಕ್ಷರ ಯಜ್ಙ ವತಿಯಿಂದ ಮಕ್ಕಳಿಗೆ ಉಚಿತವಾಗಿ ಶಾಲಾ ಕಲಿಕೆ ಪಠ್ಯ ಪುಸಕ್ತಗಳನ್ನ ಹಂಚಿಕೆ ಮಾಡಲಾಯಿತು. ನಗರದ ಗಾಜಗರಪೇಟೆಯಲ್ಲಿರುವ ಕಾಡ್ಲೂರು ದೇಸಾಯಿ ಸಂಸ್ಥಾನದ ಶ್ರೀರಾಘವೇಂದ್ರ ಅಕ್ಷರ ಯಜ್ಙ ಎಂದು ಹೆಸರಿನಲ್ಲಿ ಮಕ್ಕಳಿಗೆ ಕಲಿಕೆ ಬೇಕಾಗುವಂತಹ, ಪೆನ್ಸಿಲ್, ವಿವಿಧ ಬಗೆ ನೋಟ್ ಬುಕ್, ಪೆನ್, ಜಮಿಟ್ರಿ ಬಾಕ್ಸ್, ಗ್ರಾಫ್ ಬುಕ್ ಸೇರಿದಂತೆ ಶಾಲೆಯಲ್ಲಿ ಮಕ್ಕಳಿಗೆ ಕಲಿಕೆ ಬೇಕಾದ ಸಾಮಾಗ್ರಿಗಳನ್ನ ವಿತರಿಸಲಾಗುತ್ತಿದೆ. ಸಾಮಾನ್ಯವಾಗಿ ಸರತಿ ಸಾಲಿನಲ್ಲಿ ನಿಲ್ಲಿಸಿ ಮಕ್ಕಳಿಗೆ ಬುಕ್ ಹಂಚಿಕೆ ಮಾಡಲಾಗುತ್ತದೆ. ಆದ್ರೆ ಕೆಲವರು ಆರ್ಥಿಕ ಸಮಸ್ಯೆಯಿದ್ದರೆ, ಎಲ್ಲಾದರೂ ಎದುರು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ತೆರದ ಮನೆ ತರಹ ಒಂದು ಶಾಲಾ ಸಾಮಾಗ್ರಿಗಳನ್ನ ಇರಿಸಿ ಉಚಿತವಾಗಿ ನೀಡಲಾಗುತ್ತಿದೆ. ಸದ್ಯ ಕಾಡ್ಲೂರು ಸಂಸ್ಥಾನ ವಂಶಸ್ಥರು ಮೊದಲಿನಿಂದಲೂ ಸಾಮಾಜಿಕ ಸೇವೆಯನ್ನ ಮಾಡಿಕೊಂಡು ಬರುತ್ತಿದ್ದು, ಕೋವಿಡ್ ಎರಡನೇ ಅಲೆಯಿಂದ ಹಲವರಿಗೆ ತೊಂದರೆಯಾಗಿದೆ. ಇದಕ್ಕಾಗಿ ತಮ್ಮ ಮಕ್ಕಳಿಗೆವ ವಿದ್ಯಾಬ್ಯಾಸ ವ್ಯಯ ಮಾಡಿಷ್ಟು ಮೊತ್ತದ ಶಾಲಾ ಸಾಮಾಗ್ರಿಗಳು ಈಗ ತಂದು ಉಚಿತವಾಗಿ ನೀಡುತ್ತಿದ್ದಾರೆ. ಇವರ ಈ ಕಾರ್ಯ ನೋಡಿದ ಸ್ನೇಹಿತರು, ಹಿತೈಷಿಗಳು ತಮ್ಮಗೆ ಆದಷ್ಟು ಸಹ ಸಹಾಯ ಮಾಡುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಕಾಡ್ಲೂರು ಸಂಸ್ಥಾನದ ವಂಶಸ್ಥರಾದ ರಂಗರಾವ್ ದೇಸಾಯಿ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಕೆಂಗೇರಿಯ ಕೆ.ಎಚ್.ಬಿ ಬಂಡೇಮಠ ಬಡಾವಣೆ ಬಿಬಿಎಂಪಿಗೆ ಹಸ್ತಾಂತರಿಸಲು ಸಿ.ಎಂ ಗೆ ಮನವಿ