Select Your Language

Notifications

webdunia
webdunia
webdunia
webdunia

ಕೃಷ್ಣ ಮಠಕ್ಕೆ ಇಂದಿನಿಂದ ದರ್ಶನಕ್ಕೆ ಅವಕಾಶ

ಕೃಷ್ಣ ಮಠಕ್ಕೆ ಇಂದಿನಿಂದ ದರ್ಶನಕ್ಕೆ ಅವಕಾಶ
bangalore , ಭಾನುವಾರ, 11 ಜುಲೈ 2021 (14:48 IST)
ಉಡುಪಿ: ಜಿಲ್ಲೆಯ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಭಕ್ತರಿಗೆ ಶ್ರೀಕೃಷ್ಣನ ದರ್ಶನ ಪಡೆಯಲು ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ.ಅನ್ ಲಾಕ್ ಹಿನ್ನಲೆಯಲ್ಲಿ  ರಾಜ್ಯ ಸರ್ಕಾರ ದೇವಸ್ಥಾನ ತೆರೆಯಲು ಅವಕಾಶ ‌ನೀಡಿದೆ ಆದರೆ ಉಡುಪಿ ಅಷ್ಟ ಮಠಗಳು ಸರ್ಕಾರ ಅವಕಾಶ ನೀಡಿದ್ದರೂ ದೇವರ ದರ್ಶನ ಒಂದು ವಾರ ಮುಂದೂಡಲಾಗಿದೆ ಎಂದು ಮಠದ ಆಡಳಿತ ಆದೇಶವನ್ನು ಹೊರಡಿಸಿತು. ಇದೀಗ ಪರ್ಯಾಯ ಶ್ರೀಗಳ‌ ಆದೇಶದಂತೆ ಇಂದಿನ ಭಾನುವಾರದಿಂದ ಕೃಷ್ಣನ‌ ದರ್ಶನಕ್ಕೆ ಅವಕಾಶವನ್ನು ತಲುಪಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ. ಉಡುಪಿ ಶ್ರೀಕೃಷ್ಣಮಠದಲ್ಲಿ
ಮಧ್ಯಾಹ್ನ 2ಗಂಟೆಯಿಂದ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶವನ್ನು ನೀಡಲಾಗಿದ್ದು ಕರುನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತರಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆ.ಮಾಸ್ಕ್ ಹಾಗೂ ಸಾಮಾಜಿಕ‌ ಅಂತರ ಕಡ್ಡಾಯ ಪಾಲಿಸಬೇಕು ಹಾಗೂ ಶ್ರೀ ಕೃಷ್ಣನ ದರ್ಶನ ಪಡೆಯಲು ಮಾತ್ರ ಅವಕಾಶ  ನೀಡಿದೆ ಎಂದು ಪರ್ಯಾಯ ಶ್ರೀಗಳು ತಿಳಿಸಿದ್ದಾರೆ.
ಯಾವುದೇ ತೀರ್ಥ- ಪ್ರಸಾದ ಸೇವೆಗಳಿಲ್ಲ ಭಕ್ತರು ಕೇವಲ ಶ್ರೀ ಕೃಷ್ಣನ ದರ್ಶನವನ್ನು ಮಾಡಿ ಹೋಗಬಹುದು ಎಲ್ಲಾ ಭಕ್ತರು ಇದಕ್ಕೆ ಸಹಕರಿಸಬೇಕು ಎಂದು ಪರ್ಯಾಯ ಶ್ರೀ ಈ‌ಶಪ್ರಿಯ ತೀರ್ಥ ಸ್ವಾಮೀಜಿ ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಗಲು ಸಂಚರಿಸುವ ಮಂಗಳೂರು-ಬೆಂಗಳೂರು ರೈಲಿಗೆ ಚಾಲನೆ!