ಬೆಂಗಳೂರಿನ ಪುಟ್ಟ ಮಕ್ಕಳು ಹುಷಾರ್..!
ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು: ಕೊರೋನಾ ಮಹಾಮಾರಿಯು ಮಕ್ಕಳ ಮಾನಸಿಕತೆ ಮೇಲೆ ಪ್ರಭಾವ ಬೀರುತ್ತಿದೆ. ಕೊರೋನಾ ಎಂದರೆ ಭಯ ಬೀಳುವ ಸನ್ನಿವೇಶ ಎದುರಾಗುದೆ. ಬೆಂಗಳೂರು ನಗರದಲ್ಲಿನ ಮಕ್ಕಳಿಗೆ ಕೊರೋನಾ ಬಗೆಗಿನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮೊದಲ ಅಲೆಯ ಸಂಧರ್ಭದಲ್ಲಿ ಕೊರೋನಾಗೆ ಹೆದರಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗಿದ್ದವು
. ಎರಡನೇ ಅಲೆಯಲ್ಲೂ ಇಂಥ ಘಟನೆಗಳು ವರದಿಯಾಗಿವೆ. ಇದೀಗ ಮೂರನೇ ಅಲೆಯಲ್ಲಿ ಮಕ್ಕಳು ಇಂಥಾ ಮಾನಸಿಕ ಖಿನ್ನತೆಗೆ ಒಳಗಾಗ್ತಿರುವುದರ ಬಗ್ಗೆ ಮಕ್ಕಳ ರೋಗ ತಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಶ್ಚರ್ಯಕರ ಘಟನೆ ನಡೆದು ಹೋಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಗರದ ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಮಗುವೊಂದನ್ನು ಅನಾರೋಗ್ಯದ ಹಿನ್ನೆಲೆ ಪೋಷಕರು ಕರೆದುಕೊಂಡು ಬಂದಿದ್ದರು. ಮಗು ಹೇಳಿದ ಮಾತು ಕೇಳದ ಕಾರಣ 'ಕೊರೋನಾ ಅಂಕಲ್' ಬರ್ತಾನೆ ಅಂತ ಪೋಷಕರು ಹೆದರಿಸಿದ್ದಾರೆ. ಊಟ ಮಾಡು ಇಲ್ಲಾಂದ್ರೆ 'ಕೊರೋನಾ ಅಂಕಲ್' ಬರ್ತಾನೆ ಎಂದಿದ್ದ ಪೋಷಕರು ಮಗುವಿಗೆ ಬೆದರಿಸಿದ್ದಾರೆ. ಪರಿಣಾಮ ನಿದ್ದೆಯಲ್ಲೂ 'ಕೊರೋನಾ ಅಂಕಲ್ ಬೇಡ' ಎಂದು ಹುಡುಗ ಹೇಳಿದ್ದನಂತೆ. ಈ ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ತಜ್ಞ ಡಾ ಸುರೇಂದ್ರ ಮಕ್ಕಳ ಮುಂದೆ ಕೊರೋನಾ ಬಗ್ಗೆ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಕಾರಣದಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಕುತ್ತು.!!
ಕೊರೋನಾ ಕಾಲದಲ್ಲಿ ಮಕ್ಕಳ ಆರೋಗ್ಯದಲ್ಲಿ ಹಲವು ಬಗೆಯಲ್ಲಿ ಏರುಪೇರು ಆಗುತ್ತಿದೆ. ಮನೆಯಲ್ಲೇ ಕೂರುವುದರಿಂದ ಬಿಸಿಲಿಗೆ ಓಡಾಡದೆ ಮಕ್ಕಳಿಗೆ ವಿಟಮಿನ್ ಡಿ ಕೊರತೆ ಕಾಡುತ್ತಿದೆ. ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡಿ ಸ್ಕ್ರೀನ್ ಟೈಮ್ ಜಾಸ್ತಿಯಾಗ್ತಿದೆ ಮಕ್ಕಳಿಗೆ. ಇದರಿಂದ ಮಕ್ಕಳ ಕಣ್ಣಿನ ದೃಷ್ಠಿ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಸಾಧ್ಯ ಆದಷ್ಟೂ ಮಕ್ಕಳ ದೈಹಿಕ ಆಟಾಟೋಪಕ್ಕೆ ಪೋಷಕರು ಒತ್ತು ಕೊಡಬೇಕು. ನೈಸರ್ಗಿಕವಾದ ಗಾಳಿ, ಬಿಸಿಲಿಗೆ ಮಕ್ಕಳನ್ನು ಕನೆಕ್ಟ್ ಮಾಡ ಬೇಕು. ಇಲ್ಲದಿದ್ದರೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಈ ಕೊರೋನಾ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ನಗರದಲ್ಲಿ ಮಕ್ಕಳ ಬೇಕಾಗಿರುವ ವ್ಯವಸ್ಥೆಯನ್ನು ಮಾಡುವುದರ ಕಡೆಗೆ ಬಿಬಿಎಂಪಿ ಸಲಹಾ ಸಮಿತಿ ರಚಿಸಿ ಕೆಲಸ ಮಾಡುತ್ತಿದೆ. ಪೋಷಕರು ಮಕ್ಕಳಲ್ಲಿ ಆತಂಕ ಮೂಡಿಸುವುದು ಬಿಟ್ಟು ಸುರಕ್ಷಿತ ಮೇಲ್ನೋಟದೊಂದಿಗೆ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಒಳಿತು.