Select Your Language

Notifications

webdunia
webdunia
webdunia
webdunia

ರ್ಯಾಗಿಂಗ್​​ಗೆ ವಿದ್ಯಾರ್ಥಿನಿ ಬಲಿ

Student victim of ragging
ಹೈದರಾಬಾದ್ , ಮಂಗಳವಾರ, 28 ಫೆಬ್ರವರಿ 2023 (19:59 IST)
ಹೈದರಾಬಾದ್​​ನ ಕಾಕತೀಯ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಯೋರ್ವಳಿಗೆ ಯುವಕನೋರ್ವ ರ್ಯಾಗಿಂಗ್​ ಮಾಡಿದ್ದು, ಯುವತಿ ಆತ್ಮಹತ್ಯೆಗೆ ಯತ್ನಿಸಿದ್ಲು. ಈಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಪ್ರಥಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ. ಮೃತ ಪ್ರೀತಿ ತಂದೆ ನೀಡಿದ ದೂರಿನ ಆಧಾರದ ಮೇಲೆ ದ್ವಿತೀಯ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೊಹಮ್ಮದ್ ಅಲಿ ಸೈಫ್​​​ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ರ್ಯಾಗಿಂಗ್, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಅಡಿ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮತ್ತು ಆರೋಪಿಯ ವಾಟ್ಸ್ಆ್ಯಪ್ ಚಾಟ್​​ಗಳು ರ್ಯಾಗಿಂಗ್ ನಡೆದಿರುವುದನ್ನು ಸೂಚಿಸುತ್ತಿವೆ ಎಂದು ವಾರಂಗಲ್​​ ಪೊಲೀಸ್ ಕಮಿಷನರ್ A.V ರಂಗನಾಥ್ ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಜ್ಞಾನಭಾರತಿ ವಿಶ್ವವಿದ್ಯಾಲದಲ್ಲಿ 3 ದಿನ ಪುಸ್ತಕ ಮೇಳ