Select Your Language

Notifications

webdunia
webdunia
webdunia
webdunia

ಖಿನ್ನತೆ ಅನ್ನೋ ಭೂತಕ್ಕೆ ಬಲಿಯಾದ ವಿದ್ಯಾರ್ಥಿ

A student who is a victim of depression
bangalore , ಮಂಗಳವಾರ, 28 ಫೆಬ್ರವರಿ 2023 (17:05 IST)
ಆಕೆ ಶಾಲೆಯಲ್ಲಿ ‌ಪ್ರತಿಭಾನ್ವಿತ ವಿದ್ಯಾರ್ಥಿ ಇಡೀ ಕ್ಲಾಸ್ ಗೆ ಟಾಪರ್ ಆಗಿದ್ದಳು. ಮಧ್ಯಾಹ್ನ ಅಮ್ಮನ ಜತೆಯಲ್ಲಿ ಖುಷಿ-  ಖುಷಿಯಾಗಿ ಮಾತನಾಡಿ ಬಂದಿದ್ದಾಳೆ.ಇತ್ತೀಚಿನ ದಿನಗಳಲ್ಲಿ ಖಿನ್ನತೆ ಎನ್ನುವದು ಯಾರನ್ನ.ಬಿಟ್ಟಿಲ್ಲ. ತರಗತಿಯಲ್ಲಿ ಬ್ರಿಲಿಯೆಂಟ್ ಆಗಿದ್ದ  ಸ್ಟೂಡೆಂಟ್ ಅವಳು  ಓದೋದ್ರಲ್ಲಿ ಕ್ಲಾಸಿಗೆ  ಫಸ್ಟ್. ಆದ್ರೇ ನಿನ್ನೆ  ಚಾಲುಕ್ಯ ಸರ್ಕಲ್‌ ನಲ್ಲಿರೋ ಹೈ ಪಾಯಿಂಟ್ ಅಪಾರ್ಟ್  ಮೇಲಿಂದ ಹಾರಿಬಿದ್ದು 17 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಪ್ರಕೃತಿ ಸೋಫಿಯಾ ಕಾಲೇಜಿನಲ್ಲಿ ದ್ವಿತೀಯ ಪಿಐಸಿ ಓದುತ್ತಿದ್ದು ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದಳು. ಕಳೆದ ಕೆಲ‌ದಿನಗಳಿಂದ ಖಿನ್ನತೆಗೊಳಗಾಗಿದ್ದ ಪ್ರಕೃತಿ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ಳಂತೆ. ಇದೇ ಕಾರಣಕ್ಕ ಪ್ರಕೃತಿ ಪೋಷಕರು ವೈದ್ಯರ ಬಳಿ ಪ್ರಕೃತಿಗೆ ಕೌನ್ಸಿಲಿಂಗ್ ಕೂಎ ಕೊಡಿಸಿದ್ದಾರೆ‌. 

ಇಷ್ಟಾದ್ರು ನಿನ್ನೆ ಸಂಜೆ ಕಾಲೇಜಿನ ಪಕ್ಕದಲ್ಲಿರೋ ಅಪಾರ್ಟ್ಮೆಂಟ್ ಗೆ ಬಂದು ಸೀದಾ ಹತ್ತನೆ ಮಹಡಿಗೆ ಹೋಗಿದ್ದಾಳೆ. ಟೆರಸ್ ಎಂಟ್ರಿ ಲಾಕ್ ಆಗಿದ್ದರಿಂದ ಹತ್ತನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ತ ಘಟನೆ ಹಿನ್ನೆಲೆ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಹತ್ಯೆಗೆ ಒಂದು ಕೋಟಿಗೆ ಸುಪಾರಿ ಕೊಟ್ಟ ಪಾಪಿ ಮಗ