Select Your Language

Notifications

webdunia
webdunia
webdunia
webdunia

ಕಿರಿಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

A man who was shouting committed suicide by hanging himself in a busy area
bangalore , ಮಂಗಳವಾರ, 28 ಫೆಬ್ರವರಿ 2023 (16:53 IST)
ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಕಿರಿಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. 
 
ಚನ್ನಪಟ್ಟಣ ಮೂಲದ ಮಾದೇವ ಮೃತ ವ್ಯಕ್ತಿ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸ್ಥಳೀಯರು ಶವ ನೋಡಿ ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಮೃತ ಮಾದೇವ ಪ್ರತಿದಿನ ಕುಡಿದು ಹೆಂಡತಿ ಜೊತೆ ಜಗಳವಾಡಿ ಹಿಂಸೆ ನೀಡುತ್ತಿದ್ದ. ಈತನ ವರ್ತನೆಯಿಂದ ನೊಂದಿದ್ದ ಪತ್ನಿ ಅನೇಕ ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಪೊಲೀಸರು ಹೆಂಡತಿ ಜೊತೆ ಕಿರಿಕ್ ಮಾಡಬೇಡ ಎಂದು ವಾರ್ನ್ ಮಾಡಿ ಕಳುಹಿಸಿದ್ದರು. ಈಗಾಗಲೇ ಮೂರು ಮದುವೆಯಾಗಿದ್ದ ಮಾದೇವ ಬುದ್ದಿ ಕಲಿಯದೆ,ನಿನ್ನೆ ಬೆಳಗ್ಗೆ ಹೆಂಡತಿ ಜೊತೆ ಜಗಳವಾಡಿ 150 ರೂಪಾಯಿ ಪಡೆದು ಕಂಠಪೂರ್ತಿ ಕುಡಿದು ಬಂದು ಮತ್ತೆ ಗಲಾಟೆ ಶುರುಮಾಡಿದ್ದ. ಈ ವಿಷಯವನ್ನು ಮಾದೇವನ ಪತ್ನಿ ಪೊಲೀಸರಿಗೆ ತಿಳಿಸಿದ್ದಳು. ಸ್ಥಳಕ್ಕೆ ಬಂದ ಪೊಲೀಸರು ಮನೆಗೆ ಬಂದು ಬುದ್ದಿ ಹೇಳಿದ್ದರಿಂದ ಮನನೊಂದ ಮಾದೇವ ಪಾಪರೆಡ್ಡಿಪಾಳ್ಯ ಸರ್ಕಲ್ ಬಳಿ ಬಂದು ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ‌. ಸದ್ಯ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಕಾಲೇಜುಗಳ ಫೀಸ್ ಹಾವಳಿ