Select Your Language

Notifications

webdunia
webdunia
webdunia
webdunia

ಇಂದಿನಿಂದ ಗಾರ್ಡನ್ ಸಿಟಿಯಾಗಲಿದ್ಯಾ ಗಾರ್ಬೇಜ್ ಸಿಟಿ?

ಇಂದಿನಿಂದ ಗಾರ್ಡನ್ ಸಿಟಿಯಾಗಲಿದ್ಯಾ ಗಾರ್ಬೇಜ್ ಸಿಟಿ?
bangalore , ಮಂಗಳವಾರ, 28 ಫೆಬ್ರವರಿ 2023 (16:29 IST)
ಕೆಲಸ ಖಾಯಂಗೊಳಿಸದ ಹಿನ್ನೆಲೆ ಪೌರಕಾರ್ಮಿಕರಿಂದ ಮುಷ್ಕರ ನಡೆಯುತ್ತಿದ್ದು,ಕಸ ಗುಡಿಸೋ ಪೌರಕಾರ್ಮಿಕರಿಂದ ಇಂದಿನಿಂದ ಮುಷ್ಕರ ಶುರುವಾಗಿದೆ.ಅಧಿಕಾರಿಗಳ ಎಡವಟ್ಟಿಗೆ ಹರಾಜಾಗುತ್ತಾ ಐಟಿಸಿಟಿಯ ಮಾನ?ಬಿಬಿಎಂಪಿ ನೇಮಕಾತಿಯಲ್ಲಿ ಭಾರಿ ಗೋಲ್ಮಾಲ್ ಆಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಕೂಡಲೇ ನೇಮಕಾತಿ ಅದೇಶ ರದ್ದು ಮಾಡಬೇಕು ಅಂತ ಪೌರಕಾರ್ಮಿಕರು ಪ್ರತಿಭಟನೆ ಮಾಡ್ತಿದ್ದಾರೆ.
 
ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪೌರಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ  ಪ್ರತಿಭಟನೆ ಮಾಡಲು ನಿರ್ಧಾರಿಸಿದ್ದು,ಪೊರಕೆ ಹಿಡಿಯಲ್ಲ, ಬೀದಿ ಗೂಡಿಸಲ್ಲ ಎಂದ 16 ಸಾವಿರ ಪೌರಕಾರ್ಮಿಕರು  ಪಟ್ಟು ಹಿಡಿದಿದ್ದಾರೆ.
 
ಕಳೆದ ತಿಂಗಳು ರಾಜ್ಯ ಸರ್ಕಾರ ಬಿಬಿಎಂಪಿ ವಿಚಾರವಾಗಿ ಆದೇಶ ಮಾಡಿದೆ.ಮೊದಲ ಹಂತದಲ್ಲಿ ಗುತ್ತಿಗೆ ಪೌರಕಾರ್ಮಿಕರ ನೇಮಕಾತಿ 3643 ಕಾರ್ಮಿಕರನ್ನು ನೇರ ನೇಮಕಾತಿ ಮಾಡಿ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.ಇದೀಗ ಬಿಬಿಎಂಪಿ ಅಧಿಕಾರಿಗಳು ನೇಮಕಾತಿ ಹೆಸರಲ್ಲಿ  ವ್ಯಾಪಾರಕ್ಕೆ ಇಳಿದಿದ್ರು ಎಂದು ಆರೋಪ ಕೇಳಿಬರುತ್ತಿದೆ.ನೇಮಕಾತಿಯ ಪ್ರಕ್ರಿಯೆಯಲ್ಲಿ ಕೋಟಿ ಕೋಟಿ ಲಂಚ ಸ್ವೀಕರ ಮಾಡಿ ನೇಮಕಾತಿ ಮಾಡಿದ್ದಾರೆ.ತಮ್ಮಗೆ ಬೇಕಾದವರಿಗೆ
ಅವರ ಸಂಬಂಧಿಕರಿಗೆ ನೇಮಕಾತಿ ಮಾಡಿದಾರೆ ಎಂದು ಪೌರಕಾರ್ಮಿಕರು ಗುರುತರ ಆರೋಪಗಳನ್ನು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಮ್ಮಾಯಿ ತೆಗೆದು ಯಡಿಯೂರಪ್ಪ ಸಿಎಂ ಮಾಡಿದ್ರೆ ಗೌರವ ಇರುತ್ತೆ- ಡಿಕೆಶಿ