Publish Date: Thu, 07 Dec 2017 (15:05 IST)
Updated Date: Thu, 07 Dec 2017 (15:10 IST)
ಕೋಲಾರ: ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೋಲಾರದ ಕೆ.ಜಿ.ಎಫ್. ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ನಡೆದಿದೆ.
ಕುಮಾರ್ ಎಂಬುವವರ ಮಗ ವಿನಯ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಕೆ.ಜಿ.ಎಫ್. ಪಟ್ಟಣದ ಆಂಡ್ರಸನ್ ಪೇಟೆಯ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯ ಆಡಳಿತ ಮಂಡಳಿ ಆಯೋಜಿಸಿದ ಮೈಸೂರು ಪ್ರವಾಸಕ್ಕೆ ಬೇಕಾದ 500 ರೂಪಾಯಿಯನ್ನು ತಂದೆ ಬಳಿ ಕೇಳಿದನು.
ಪೋಷಕರು ಹಣ ಕೊಡಲು ನಿರಾಕರಿಸಿದ್ದಕ್ಕೆ ನೊಂದ ಬಾಲಕ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಕೆ.ಜಿ.ಎಫ್ ನ ಬೇತಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ