ಬೆಂಗಳೂರು: ಯುವತಿಯರ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕೇಳಿರುತ್ತೇವೆ. ಹೆಚ್ಚಾಗಿ ಇಂತಹ ಘಟನೆಗಳು ಯುವತಿಯರ ಮನೆಯ ಹೊರಗೆ ಅಂದರೆ ಶಾಲಾ-ಕಾಲೇಜುಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತದೆ.
									
						                     
							
							
			        							
								
																	
ಆದರೆ ಇಲ್ಲೊಬ್ಬ ಭೂಪ ಯುವತಿಯ ಮನೆ ಬಾಗಿಲಿಗೆ ಬಂದು ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಜಯನಗರದ 7ನೇ ಬ್ಲಾಕ್ ನಲ್ಲಿ ನಡೆದಿದೆ. ಕೊರಿಯರ್ ಬಾಯ್ ಎಂದು ಹೇಳಿ ಮನೆಯ ಬಾಗಿಲು ತಟ್ಟಿ, ಬಾಗಿಲು ತೆರೆದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ. ಅಲ್ಲದೆ ಆಕೆಗೆ ತನ್ನ ಮರ್ಮಾಂಗವನ್ನು ತೋರಿಸಿ ಪರಾರಿಯಾಗಿದ್ದಾನೆ. ಈ ಪ್ರಕರಣ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ