Publish Date: Wed, 06 Dec 2017 (19:24 IST)
Updated Date: Wed, 06 Dec 2017 (19:26 IST)
ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿ ಫ್ಯಾಷನ್ ಡಿಸೈನರ್‌ಗೆ ಕಾರು ಚಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಮಾರನೇ ದಿನ ಕೂಡಾ ಯುವತಿಗೆ ಹಲವಾರು ಬಾರಿ ಮೊಬೈಲ್ ಕರೆ ಮಾಡಿ, ಓಲಾ ಕಚೇರಿಗೆ ದೂರು ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ಹಿನ್ನೆಲೆಯಲ್ಲಿ ಓಲಾ ಸಂಸ್ಥೆ ಚಾಲಕನ್ನು ಉದ್ಯೋಗದಿಂದ ವಜಾಗೊಳಿಸಿದೆ.
ಯುವತಿ ಇಂದಿರಾ ನಗರದಿಂದ ಬಿಟಿಎಂ ಲೇಔಟ್‌ಗೆ ರಾತ್ರಿ 10.30 ಗಂಟೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಓಲಾ ಕಾರು ಚಾಲಕ ರಾಜಶೇಖರ್ ರೆಡ್ಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.