Select Your Language

Notifications

webdunia
webdunia
webdunia
webdunia

ಪಿಎಸ್ಐಯಿಂದ ಯುವತಿಯರಿಗೆ ಕಿರುಕುಳ

ಪಿಎಸ್ಐಯಿಂದ ಯುವತಿಯರಿಗೆ ಕಿರುಕುಳ
ವಿಜಯಪುರ , ಬುಧವಾರ, 6 ಡಿಸೆಂಬರ್ 2017 (12:53 IST)
ಪಾಸ್​ಪೋರ್ಟ್​ ಮತ್ತು ವೀಸಾ ಪರಿಶೀಲನೆಗೆ ಬರುವ ಯುವತಿಯರಿಗೆ ಮತ್ತು ಮಹಿಳೆಯರಿಗೆ ​ ಪಿಎಸ್​ಐಯೊಬ್ಬರು ಪೋಲಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದ ಘಟನೆ ಜರುಗಿದೆ.

ವಿಜಯಪುರದ ಹೊರ್ತಿ ಠಾಣೆಯ ಪಿಎಸ್​ಐ ಪ್ರಕಾಶ್​ ರಾಠೋಡ ಅವರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಜಮಖಂಡಿಯ ಬನಹಟ್ಟಿ ಯುವತಿಯೊಬ್ಬರು ಬಾಗಲಕೋಟೆ ಎಸ್​ಪಿಗೆ ದೂರು ನೀಡಿದ್ದಾರೆ.

ಪ್ರಕಾಶ್​ ಅವರು ಬನಹಟ್ಟಿ ಠಾಣೆಯಲ್ಲಿ ಪಿಎಸ್​ಐ ಆಗಿದ್ದಾಗ ಯುವತಿಯರಿಗೆ ಮೆಸೇಜ್​  ಕಳುಹಿಸಿ ಫ್ರೆಂಡ್​ಶಿಪ್​ ಮಾಡುವಂತೆ ಹೇಳುತ್ತಿದ್ದರು. ವಿರೋಧಿಸಿದವರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ-ಮಗಳ ಕೊಲೆ, ಮಗನ ಕೈವಾಡ ಶಂಕೆ