Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವಿರುದ್ಧ ಮತ್ತೆ ಬೀದಿ ಬದಿ ವ್ಯಾಪಾರಿಗಳ ಸಂಘದ ಆಕ್ರೋಶ

BBMP
bangalore , ಸೋಮವಾರ, 18 ಡಿಸೆಂಬರ್ 2023 (16:26 IST)
ಬಿಬಿಎಂಪಿ ಒತ್ತುವರಿ ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಅಂತ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗ ಸ್ವಾಮಿ ಆರೋಪ ಮಾಡಿದ್ದಾರೆ.ಮಳಿಗೆಗೆ ಬಾಡಿಗೆ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದವರನ್ನ  ಫುಟ್ ಪಾತ್ ಒತ್ತುವರಿ ಮಾಡಿದ್ದಾರೆ.ಅಧಿಕಾರಿಗಳು ಶಾಮೀಲಾಗಿ ಈ ರೀತಿ ವ್ಯಾಪಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ .

ನಾವು ಬಾಡಿಗೆ ಕಟ್ಟಲು ಸಹ ಸಿದ್ದ ಇದ್ದರೂ ಬೇಕಾಬಿಟ್ಟಿ ತೆರವು ಮಾಡುತ್ತಿದ್ದಾರೆ.ನಮ್ಮ ಕುಂದು ಕೊರತೆಗಳ ನಿವಾರಣೆಗೆ ಸಮಿತಿ ರಚನೆ ಆಗಬೇಕು .ಬೆಂಗಳೂರಿನ ಎಲ್ಲ ವಲಯಗಳ ವ್ಯಾಪ್ತಿಯಲ್ಲಿ ಸರ್ವೇ ಮಾಡಬೇಕು .ಜಿಪಿಎಸ್, ಬಯೋ ಮೆಟ್ರಿಕ್ ಮೂಲಕ ಸಮೀಕ್ಷೆ ಮಾಡಬೇಕು .ಪ್ರತಿ ತಿಂಗಳು ಪಟ್ಟಣ ವ್ಯಾಪಾರ ಸಮಿತಿ ಸಭೆ ಮಾಡಬೇಕು .ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬೀದಿಬದಿ ಒಕ್ಕೂಟದ ಮೂಲಕ ಮನವಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ- ಬಿ ಸಿ ಪಾಟೀಲ್