Publish Date: Sat, 26 Nov 2022 (16:06 IST)
Updated Date: Sat, 26 Nov 2022 (16:10 IST)
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಗೆ ಪುಂಡರು ಕಲ್ಲು ತೂರಿ ಮತ್ತೆ ಪುಂಡಾಟ ಮೆರೆದಿದ್ದಾರೆ. ನಿನ್ನೆ ರಾತ್ರಿ 10.30 ಕ್ಕೆ ಮೀರಜ್- ಕಾಗವಾಡ ಮಧ್ಯೆ ಪುಣೆಯಿಂದ ಅಥಣಿಗೆ ಬರುತ್ತಿದ್ದ ಕರ್ನಾಟಕ ಬಸ್ಗೆ ಕಲ್ಲು ತೂರಿದ ಪರಿಣಾಮ ಬಸ್ ಮುಂದಿನ ಗಾಜು ಜಖಂ ಆಗಿದೆ. ಕರ್ನಾಟಕ ಬಸ್ಗಳಿಗೆ ಕಲ್ಲು ತೂರಾಟ ನಡೆಸುತ್ತಿರುವುದರಿಂದ ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮಿರಜ್ ಮಾರ್ಗವಾಗಿ ಸಂಚರಿಸುವ ಹಾಗೂ ಕಾಗವಾಡ ಬಾರ್ಡರ್ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಸೇವೆ ಬಂದ್ ಆಗಿದೆ. ಇದರಿಂದ ಪ್ರಯಾಣಿಕರಿಗೂ ತೊಂದರೆಯಾಗಿದೆ. ಕೆಲ ಕಿಡಿಗೇಡಿಗಳ ಪುಂಡಾಟಕ್ಕೆ ಸಾಮಾನ್ಯ ಜನರು ಸಂಚಾರ ವ್ಯವಸ್ಥೆ ಇಲ್ಲದೆ ಪರಿತಪಿಸುವಂತಾಗಿದೆ.