ನಗರದ ಶೇಷಾದ್ರಿಪುರಂ ನಲ್ಲಿರುವ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸ್ವಚ್ಚತೆ ಅನ್ನೋದೆ ಕಾಣದಂತಾಗಿದೆ. ಗಬ್ಬು ನಾರುತ್ತಿರುವ ವಿಧ್ಯಾರ್ಥಿನಿ ನಿಲಯದಲ್ಲಿನ ಮಲಿನ ನೀರನ್ನು ರಸ್ತೆಗೆ ಬಿಡಲಾಗುತ್ತಿದೆ. ವಿಧ್ಯಾರ್ಥಿನಿ ನಿಲಯದಿಂದ ನೇರವಾಗಿ ಮೋರಿಗೆ ಹರಿ ಬಿಡುತ್ತಿರುವ ಕಾರಣ ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿಯಾಗುತ್ತಿದ್ದು ಪ್ರತಿ ದಿನ ಗಬ್ಬು ವಾಸನೆಯಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.ಸಾಂಕ್ರಾಮಿಕ ರೋಗದ ಭೀತಿಯಲ್ಲಿ ದಿನ ಕಳೆಯುತ್ತಿರುವ ಜನರು ಎಷ್ಟೇ ಬಾರಿ ಮನವಿ ಮಾಡಿದ್ರು ಯಾವೊಬ್ಬ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.