Select Your Language

Notifications

webdunia
webdunia
webdunia
webdunia

ಸಾಲಮನ್ನಾ ವಿಚಾರದ ಬಗ್ಗೆ ಹೇಳಿಕೆ; ದರ್ಶನ್ ವಿರುದ್ಧ ಕಿಡಿಕಾರಿದ ರೈತ ಮುಖಂಡ

ಸಾಲಮನ್ನಾ ವಿಚಾರದ ಬಗ್ಗೆ ಹೇಳಿಕೆ; ದರ್ಶನ್ ವಿರುದ್ಧ ಕಿಡಿಕಾರಿದ ರೈತ ಮುಖಂಡ
ಬೆಂಗಳೂರು , ಸೋಮವಾರ, 29 ಏಪ್ರಿಲ್ 2019 (10:51 IST)
ಬೆಂಗಳೂರು : ಸಾಲಮನ್ನಾ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಹೇಳಿಕೆಗೆ ಮಂಡ್ಯ ರೈತರು ಬೆಂಬಲ ಸೂಚಿಸಿದರೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು. ಶನಿವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟ ದರ್ಶನ್ ಮಾತನಾಡುತ್ತಾ, ಸಾಲಮನ್ನಾ ಮಾಡದಿದ್ರೆ ಪರವಾಗಿಲ್ಲ. ರೈತರ ಬೆಳೆಗಳಿಗೆ ಬೆಂಬಲ ನೀಡಿದರೆ ಅವರೇ ಸಾಲದಿಂದ ಋಣಮುಕ್ತರಾಗುತ್ತಾರೆ ಎಂದು ಹೇಳಿದ್ದರು. ದರ್ಶನ್ ಅವರ ಮಾತಿಗೆ ಮಂಡ್ಯ ರೈತರು ಸಂತಸಗೊಂಡು ತಮ್ಮ ಪರವಾಗಿ ಹೋರಾಡಲು ಮುಂದಾಳತ್ವ ವಹಿಸಿ ಎಂದು ಕೇಳಿಕೊಂಡಿದ್ದಾರೆ.

 

ಆದರೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಇಂದು ರೈತರು ನೇಣು ಬಿಗಿದುಕೊಂಡು ಜೀವ ಬಿಡುತ್ತಿದ್ದಾರೆ. ದರ್ಶನ್ ಅವರಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕಷ್ಟ ಗೊತ್ತಿಲ್ಲ. ತಿಳುವಳಿಕೆ ಇಲ್ಲದೆ ದರ್ಶನ್ ಈ ರೀತಿ ಮಾತನಾಡಿದ್ದಾರೆ. ರೈತರ ಬಗ್ಗೆ ವಿಷಯಗಳು ಗೊತ್ತಿಲ್ಲದಿದ್ದರೆ, ನಮ್ಮೊಂದಿಗೆ ಚರ್ಚಿಸಿ ತಮ್ಮ ಪ್ರತಿಕ್ರಿಯೆ ನೀಡಬೇಕು. ರಾಜಕೀಯ ಭರಾಟೆಯಲ್ಲಿ ತಮಗೆ ತೋಚಿದ್ದನ್ನು ಮಾತನಾಡಿರಬಹುದು ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ದರ್ಶನ್ ವಿರುದ್ಧ  ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 


Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೆ ನಾನು ರಾಜಕೀಯ ನಿವೃತ್ತಿ ಹೇಳುವೆ ಎಂದವರಾರು ಗೊತ್ತೇ?!