Publish Date: Fri, 19 Sep 2025 (09:14 IST)
Updated Date: Fri, 19 Sep 2025 (09:18 IST)
ಬೆಂಗಳೂರು: ಜಾತಿಗಣತಿ ಕಾಲಂನಲ್ಲಿ ವಿವಾದಕ್ಕೀಡಾಗಿದ್ದ ಕ್ರಿಶ್ಚಿಯನ್ ಧರ್ಮದಲ್ಲಿ ಹಿಂದೂ ಜಾತಿಗಳ ಸೇರ್ಪಡೆಗೆ ಕೊನೆಗೂ ರಾಜ್ಯ ಸರ್ಕಾರ ಕೊಕ್ ನೀಡಲು ತಿರ್ಮಾನಿಸಿದೆ.
ನಿನ್ನೆ ಸಂಪುಟ ಸಭೆಯಲ್ಲಿ ಸಚಿವರಿಂದ ಈ ವಿವಾದಿತ ಜಾತಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿಶೇಷವಾಗಿ ಲಿಂಗಾಯತ ಸಮುದಾಯದ ಸಚಿವರು ಸಿಎಂ ಸಿದ್ದರಾಮಯ್ಯ ಎದುರು ರೋಷಾವೇಷ ಪ್ರದರ್ಶಿಸಿದ್ದರು. ಇದರಿಂದ ಸ್ವತಃ ಸಿಎಂ ಶಾಕ್ ಗೊಳಗಾಗಿದ್ದರು.
ಈ ಹೊಸ ಜಾತಿಗಳನ್ನು ಸೃಷ್ಟಿಸಲು ಅಧಿಕಾರ ಕೊಟ್ಟಿದ್ದು ಯಾರು ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದ್ದರು. ಇನ್ನು ಎಂಬಿ ಪಾಟೀಲ್ ಕೂಡಾ ಕೂಗಾಡಿದ್ದರು. ಈ ವಿವಾದಿತ ಜಾತಿಗಣತಿಯಿಂದ ನಮಗೇ ತೊಂದರೆಯಾಗಬಹುದು. ಜಾತಿಗಣತಿ ಮುಂದೂಡಿಕೆ ಮಾಡಿ ಎಂದು ಆಗ್ರಹಿಸಿದ್ದರು.
ಇದೀಗ ವಿವಾದಿತ ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂಬಿತ್ಯಾದಿ ಹಿಂದೂ ಜಾತಿಗಳ ಸೇರ್ಪಡೆಯನ್ನು ಕೈ ಬಿಡಲಾಗಿದೆ. ಕ್ರಿಶ್ಚಿಯನ್ ಧರ್ಮದ ಜೊತೆ ಹಿಂದೂ ಜಾತಿಗಳನ್ನು ಸೇರಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈಗ ವಿವಾದಿತ ಅಂಶವನ್ನು ಕೈ ಬಿಡಲು ತೀರ್ಮಾನಿಸಲಾಗಿದೆ.