Select Your Language

Notifications

webdunia
webdunia
webdunia
webdunia

ಜಲಕ್ಷಾಮಕ್ಕೆ ಎಸ್‌.ಟಿ.ಸೋಮಶೇಖರ್‌ ಸಲಹೆ!

 ಎಸ್‌.ಟಿ.ಸೋಮಶೇಖರ್‌

geetha

bangalore , ಶುಕ್ರವಾರ, 23 ಫೆಬ್ರವರಿ 2024 (17:42 IST)
ಬೆಂಗಳೂರು : ಜನರ ನೀರಿನ ಸಂಕಷ್ಟವನ್ನು ಬಗೆಹರಿಸಲು ಎಲ್ಲಾ ದೇಗುಲಗಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಬೇಕೆಂದು ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿದ್ದಾರೆ.ಕಳೆದ ವರ್ಷ ಬರ ಬಂದ ಹಿನ್ನೆಲಯಲ್ಲಿ ರಾಜ್ಯದಲ್ಲಿ ಜಲಕ್ಷಾಮ ಉಂಟಾಗಿದೆ. ಈ ಹಿಂದೆ ಎಂದೂ ಕೂಡ ಕೇಳರಿಯದಂತಹ ಜಲಕ್ಷಾಮ ಈ ವರ್ಷ ತಲೆದೋರಿದ್ದು, ಜನಸಾಮಾನ್ಯರಿಗೆ ನೀರಿನ ಅಭಾವ ಉಂಟಾಗಿದೆ ಎಂದು ಎಸ್‌.ಟಿ. ಸೋಮಶೇಖರ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯಾದ್ಯಂತ ಕೊಳವೆ ಬಾವಿ, ಕೆರೆ, ನದಿಗಳು ಬತ್ತಿವೆ.ಜನರು ನೀರಿಗಾಗಿ ಪರಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಲಿದೆ. ಸರ್ಕಾರದ ಜೊತೆಗೆ ಶಾಸಕರು ಜನ ಸಂಕಷ್ಟ ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಈ ಸಂದರ್ಭದಲ್ಲಿ ದೇವರ ಅನುಗ್ರಹವೂ ಮುಖ್ಯ ಎಂದಿರುವ ಎಸ್‌.ಟಿ. ಸೋಮಶೇಖರ್‌ ಮುಜರಾಯಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಆದೇಶಿಸುವಂತೆ ಸಚಿವರಲ್ಲಿ ಕೋರಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ದಿವಾಳಿಯಾಗಿದ್ದಕ್ಕೆ ದೇವಾಲಯ ಹುಂಡಿಗೆ ಕೈ ಹಾಕಿದ ಕಾಂಗ್ರೆಸ್: ಪ್ರಹ್ಲಾದ್ ಜೋಶಿ