Select Your Language

Notifications

webdunia
webdunia
webdunia
webdunia

ಮೇ 18ರಿಂದ ಎಸ್ಸೆಸ್ಸೆಲ್ಸಿ ಎರಡನೇ ಪರೀಕ್ಷೆ: ಮರುಮೌಲ್ಯಮಾಪನ ಬಗ್ಗೆ ಇಲ್ಲಿದೆ ಮಾಹಿತಿ

SSLC exam, Minister Madhu Bangarappa, revaluation
ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ದಾಖಲೆಯ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ದಾಖಲೆಯ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. 

ಈ ಸಲ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. ದಾವಣಗೆರೆಯ ಭರತ್‌, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿ ಪ್ರೀತಂ, ವಿಜಯಪುರದ ಸೌಜನ್ಯ, ಬೆಂಗಳೂರು ಉತ್ತರ ಧನುಷ್‌ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಅನುತ್ತೀರ್ಣಗೊಂಡ ಮಕ್ಕಳಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ. ಈ ಬಾರಿ ಫೇಲಾದ ಮಕ್ಕಳಿಗೆ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ. 

ಸಚಿವ ಮಧು ಬಂಗಾರಪ್ಪ ಈ ಬಗ್ಗೆ ವಿವರ ನೀಡಿದ್ದಾರೆ. ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ. ಯಾರೆಲ್ಲಾ ಫೇಲ್ ಆಗಿದ್ದಾರೋ ಅವರಿಗೆ ತರಬೇತಿ ಕೊಡುವ ಕೆಲಸ ಆಗಲಿದೆ. ಯಾವ ವಿಷಯದಲ್ಲಿ ಫೇಲ್ ಆಗಿದ್ದಾರೆ ಅದರಲ್ಲಿ ಮಕ್ಕಳನ್ನು ಪಾಸ್ ಮಾಡಿಸುವ ಕೆಲಸವನ್ನು ಸಂಬಂಧಪಟ್ಟ ಶಿಕ್ಷಕರು, ಇಲಾಖೆಯವರು ಮಾಡಲಿದ್ದಾರೆ. ಯಾವ ಯಾವ ದಿನಾಂಕದಂದು ಯಾವ್ಯಾವ ಸಬ್ಜೆಕ್ಟ್ ಅನ್ನುವುದನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳ ಬಗ್ಗೆ ಅತೃಪ್ತಿ ಅಥವಾ ಸಂದೇಹವಿದ್ದಲ್ಲಿ, ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡಿದೆ. ಇದಕ್ಕಾಗಿ ಮಂಡಳಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಳಿಗಾಗಿ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಪೂರ್ಣ ವರದಿ ಇಲ್ಲಿದೆ.

ವಿದ್ಯಾರ್ಥಿಗಳು ತಾವು ಬರೆದ ಉತ್ತರಗಳಿಗೆ ಮೌಲ್ಯಮಾಪಕರು ಎಷ್ಟು ಅಂಕಗಳನ್ನು ನೀಡಿದ್ದಾರೆ ಮತ್ತು ಯಾವುದೇ ಉತ್ತರ ಮೌಲ್ಯ ಮಾಪನವಾಗದೆ ಉಳಿದಿದೆಯೇ ಎಂದು ತಿಳಿಯಲು ಸ್ಕ್ಯಾನ್ ಪ್ರತಿಯನ್ನು ಪಡೆಯಬಹುದು. ಸಾಮಾನ್ಯ ಅರ್ಜಿ ಅವಧಿ ಏಪ್ರಿಲ್ 23, 2026 ರಿಂದ ಏಪ್ರಿಲ್ 26, 2026 ರವರೆಗೆ ಇರಲಿದೆ.  ಕರ್ನಾಟಕ-ಒನ್ ಅಥವಾ ಆನ್‌ಲೈನ್ ಮೂಲಕ ಪ್ರತಿ ವಿಷಯಕ್ಕೆ ₹410 ನಿಗದಿಪಡಿಸಲಾಗಿದೆ. ಆಫ್‌ಲೈನ್ ಕೇಂದ್ರಗಳಲ್ಲಿ ಸೇವಾ ಶುಲ್ಕ ಸೇರಿ ಇದು ₹420 ಆಗಬಹುದು.

ಈಗಾಗಲೇ Kseab ವೆಬ್​ಸೈಟ್​ನಲ್ಲಿ ಲಿಂಕ್​ ನೀಡಲಾಗಿದೆ. ಅಲ್ಲದೇ ನೋಂದಾಯಿತ ಮೊಬೈಲ್​ ಸಂಖ್ಯೆ ವ್ಯಾಟ್ಸಾಪ್​ ಸಂಖ್ಯೆಗೂ ಮೆಸೇಜ್‌ ಕಳುಹಿಸಲಾಗಿದೆ. ಇದಲ್ಲೇ ಕರ್ನಾಟಕ ಒನ್​ ಹಾಗೂ ಬೆಂಗಳೂರು ಒನ್​ /ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ಕ್ಯಾನ್ ಪ್ರತಿಯನ್ನು ಪಡೆದು ಪರಿಶೀಲಿಸಿದ ನಂತರ, ವಿದ್ಯಾರ್ಥಿಗೆ ತನ್ನ ಅಂಕಗಳು ಹೆಚ್ಚಾಗುವ ಭರವಸೆ ಇದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ವಿಷಯಕ್ಕೆ ಮರುಮೌಲ್ಯಮಾಪನದ ಶುಲ್ಕ ₹810 ರಿಂದ ₹820 ವರೆಗೆ ಇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕಲಬುರಗಿ ಲಾಸ್ಟ್: ಟ್ವೀಟ್ ಮಾಡಲ್ವಾ ಎಂದು ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ