Daily Horoscope

Select Your Language

Notifications

webdunia
webdunia
webdunia
webdunia

ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ: ಪರೀಕ್ಷಿಸಲು ಏನೆಲ್ಲಾ ಬೇಕು

Exam results
ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಲಿದ್ದು, ಪರೀಕ್ಷಿಸುವುದು ಎಲ್ಲಿ ಮತ್ತು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ.

ಈ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಇಂದು 12 ಗಂಟೆಗೆ ಪ್ರಕಟವಾಗಲಿದೆ. ಈ ಬಾರಿ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಎದಿರು ನೋಡುತ್ತಿದ್ದಾರೆ. ಹಿಂದಿ ಭಾಷೆಗೆ ಕೋರ್ಟ್ ಆದೇಶದಂತೆ ಅಂಕವನ್ನೇ ನೀಡಲಾಗುತ್ತಿದೆ.

ಮೊದಲು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದು ನಂತರ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿರಲಿದೆ. ಇದಕ್ಕಾಗಿ karresults.nic.in ಎಂಬ ವೆಬ್ ಸೈಟ್ ಗೆ ಲಾಗಿನ್ ಆಗಿ ಫಲಿತಾಂಶ ಪಡೆದುಕೊಳ್ಳಬಹುದು.

ಆನ್ ಲೈನ್ ನಲ್ಲಿ ಪರೀಕ್ಷೆ ಫಲಿತಾಂಶ ವೀಕ್ಷಿಸಲು ನಿಮ್ಮ ರಿಜಿಸ್ಟರ್ ನಂಬರ್, ತಂದೆಯ ಹೆಸರು, ಅಂಕಪಟ್ಟಿಯಲ್ಲಿರುವಂತೆ ನಿಮ್ಮ ಹೆಸರು ಇತ್ಯಾದಿ ವಿವರಗಳು ಬೇಕಾಗುತ್ತವೆ. ಫಲಿತಾಂಶ ವಿಕ್ಷಣೆ ಬಳಿಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೋವಿಗೆ ಕಲ್ಲು ಬಿಸಾಕಲೆತ್ನಿಸಿದ ವ್ಯಕ್ತಿ: ಮೂಕ ಪ್ರಾಣಿ ರಿವೆಂಜ್ ತೀರಿಸಿದ್ದು ಹೀಗೆ Video