Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರಿಗೆ ಅವರ ಪಕ್ಷದವರೇ ಮಾಟ ಮಂತ್ರ ಮಾಡಿಸಿರ್ಬೇಕು: ಆರ್ ಅಶೋಕ್

R Ashok
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಅವರ ಪಕ್ಷದವರೇ ಮಾಟ ಮಂತ್ರ ಮಾಡಿಸಿರಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಇತ್ತೀಚೆಗೆ ಹಿರಿಯ ಕಾಂಗ್ರೆಸ್ ಶಾಸಕ ಎನ್ ರಾಜಣ್ಣ ಸಿದ್ದರಾಮಯ್ಯನವರು ಯಾಕೋ ಸೈಲೆಂಟ್ ಆಗಿದ್ದಾರೆ. ಅವರು ಮೌನವಾಗಿದ್ದಾರೆ. ಅವರಿಗೆ ಮಾಟ ಮಂತ್ರ ಮಾಡಿಸಿರಬೇಕು ಎಂದು ಹೇಳಿಕೆ ನೀಡಿದ್ದರು.  ಅವರ ಹೇಳಿಕೆಗೆ ಆರ್ ಅಶೋಕ್ ಇಂದು ಪ್ರತಿಕ್ರಿಯಿಸಿದ್ದಾರೆ.

‘ರಾಜಣ್ಣ ಹೇಳಿದ್ಮೇಲೆ ಅದು ಸತ್ಯ ಅಂತಾನೇ ಲೆಕ್ಕ. ಅನುಮಾನವೇ ಬೇಡ. ಸಿದ್ದರಾಮಯ್ಯನವರು ಮಾಟ ಮಂತ್ರ ನಂಬಲ್ಲ ಅಂತಾರೆ. ರಾಜಣ್ಣ ಹೇಳಿರೋದು ಕಾಂಗ್ರೆಸ್ ನವರೇ ಮಾಡಿಸಿದ್ದಾರೆ ಅಂತ. ಸಿದ್ದರಾಮಯ್ಯನವರಿಗೆ ಅವರ ಪಕ್ಷದವರೇ ಮಾಟ ಮಂತ್ರ ಮಾಡಿಸಿರಬೇಕು. ಮುಖ್ಯಮಂತ್ರಿಗಳಿಗೇ ಮಾಟ ಮಂತ್ರ ಮಾಡಿಸಿದ್ದಾರೆ ಎಂದರೆ ಸರ್ಕಾರ ಇದರಲ್ಲೇ ಮುಳುಗಿ ಹೋಗಿದೆ ಎಂದರ್ಥ’ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಇನ್ನು, ಪ್ರಧಾನಿ ಮೋದಿ ಬಗ್ಗೆ ಭಯೋತ್ಪಾದಕ ಶಬ್ಧ ಬಳಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಖರ್ಗೆಯವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷ ಸಂಸದರೂ ಸಂಸತ್ ನಲ್ಲೇ ಪೋರ್ನ್ ವಿಡಿಯೋ ನೋಡ್ತಾರೆ: ಮತ್ತೆ ಪಪ್ಪು ಯಾದವ್ ವಿವಾದ