Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಎಂದರೆ ಟಗರು ಸಾರ್ ಟಗರು: ಜಮೀರ್ ಅಹ್ಮದ್

Zameer Ahmed
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಎಂದರೆ ಟಗರು.. ಟಗರು ಎಂದು ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳ ಮುಂದೆ ಹಾಡಿ ಹೊಗಳಿದ್ದಾರೆ.
 

ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ಮುಸ್ಲಿಂ ನಾಯಕರನ್ನು ಕಿತ್ತು ಹಾಕುವಾಗಲೂ ಮೌನಕ್ಕೆ ಶರಣಾಗಿದ್ದಾರೆ ಎಂಬ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಿರಿಯ ಶಾಸಕ ಎನ್ ರಾಜಣ್ಣ ಯಾಕೋ ಸಿದ್ದರಾಮಯ್ಯ ಇತ್ತೀಚೆಗೆ ಮೊದಲಿನಂತಿಲ್ಲ. ಶರಣಾಗತಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ‘ಹೇ.. ಸಿದ್ದರಾಮಯ್ಯನವರು ಟಗರು.. ಮೊದಲೂ ಟಗರು, ಈಗಲೂ ಟಗರು ಹಾಗೇ ಇದ್ದಾರೆ. ಅಗತ್ಯ ಬಿದ್ದರೆ ಮಾತಾಡ್ತಾರೆ. ಅನಗತ್ಯವಾಗಿ ಯಾಕೆ ಮಾತನಾಡ್ತಾರೆ. ಅವರು ನಮ್ಮ ಮುಖ್ಯಮಂತ್ರಿ. ಅವರು ಮಾತಾಡಿದ್ರೆ ಅದು ಬೇರೆ ಥರಾ ಸೌಂಡ್ ಆಗುತ್ತದೆ’ ಎಂದಿದ್ದಾರೆ.

ಇನ್ನು, ಎಚ್ ಡಿಕೆ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ, ಜೆಡಿಎಸ್ ಸೇರುತ್ತಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಥೂ.. ಥೂ.. ನಾನು ಜೆಡಿಎಸ್ ಬಿಟ್ಟು ಬಂದವನು. ಕಾಂಗ್ರೆಸ್ ಪಕ್ಷ ನನಗೆ ಏನು ಕಡಿಮೆ ಮಾಡಿದೆ? ಸಮ್ಮಿಶ್ರ ಸರ್ಕಾರ ಇದ್ದಾಗ ನನಗೆ ನಿರೀಕ್ಷೆಯೇ ಇರಲಿಲ್ಲ. ಆಗಲೂ ಕಾಂಗ್ರೆಸ್ ಪಕ್ಷ ನನಗೆ ಪ್ರಮುಖ ಖಾತೆ ಕೊಟ್ಟಿತ್ತು. ಹೀಗಿರುವಾಗ ಜೆಡಿಎಸ್ ಗೆ ಹೋಗಲು ಕಾಂಗ್ರೆಸ್ ಪಕ್ಷ ನನಗೆ ಏನು ಕಡಿಮೆ ಮಾಡಿದೆ?’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ