Select Your Language

Notifications

webdunia
webdunia
webdunia
webdunia

ಹೈದರಾಬಾದ್ ಟು ಹುಬ್ಬಳ್ಳಿ ವಿಮಾನದಲ್ಲಿ ನಿಜಕ್ಕೂ ಆಗಿದ್ದೇನು, ದುರಂತ ತಪ್ಪಿದ್ದು ಹೇಗೆ Video

Hubli flight
Photo Credit: X
ಹುಬ್ಬಳ್ಳಿ: Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆಯ ಫ್ಲೈಟ್ ನಲ್ಲಿ ನಿಜಕ್ಕೂ ಆಗಿದ್ದೇನು, ದುರಂತ ತಪ್ಪಿದ್ದು ಹೇಗೆ ಇಲ್ಲಿದೆ ವಿವರ.

ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್ ನಿಂದ ಟೇಕ್ ಆಫ್ ಆಗಿದ್ದ ವಿಮಾನ 4.30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಿತ್ತು. ಆದರೆ ನಾಲ್ಕು ಗಂಟೆ ಅಗಸದಲ್ಲೇ ಚಕ್ಕರ್ ಹೊಡೆದು ಪ್ರಯಾಣಿಕರು ಜೀವ ಭಯದಲ್ಲಿ ಕಣ್ಣೀರಿಡುವಂತೆ ಮಾಡಿತ್ತು. ಅನೇಕರು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಮನೆಯವರಿಗೆ ಇದು ಕೊನೆಯ ಸಂದೇಶ ಎಂದು ಕಣ್ಣೀರಿಟ್ಟು ಸಂದೇಶ ರವಾನಿಸಿದ್ದರು. ಇದು ತಮ್ಮ ಜೀವನದ ಕೊನೆಯ ಗಳಿಗೆ ಎಂದು ವಿಡಿಯೋ ಹಂಚಿಕೊಂಡಿದ್ದರು.

ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡಿದ್ದ ಕಾರಣಕ್ಕೆ ಈ ಅನಾಹುತವಾಗಿತ್ತು. ಈ ವೇಳೆ ವಿಮಾನದಲ್ಲಿ ಕೂತಿದ್ದವರಿಗೆ ಜೈಂಟ್ ವೀಲ್ ನಲ್ಲಿ ಕೂತಿದ್ದ ಅನುಭವವಾಗಿತ್ತು.  ವಿಮಾನ ಏಕಾಏಕಿ ವಿಪರೀತ ಅಲ್ಲಾಡುತ್ತಿದ್ದಾಗ ನಮ್ಮ ಜೀವ ಇಲ್ಲಿಗೇ ಮುಗಿಯಿತು ಎಂದೇ ಎಂದುಕೊಂಡಿದ್ದೆವು ಎಂದು ಪ್ರಯಾಣಿಕರು ಭಯಾನಕ ಅನುಭವ ಹಂಚಿಕೊಂಡಿದ್ದಾರೆ.

ಆದರೆ ಪೈಲೆಟ್ ಹರಸಾಹಸಪಟ್ಟಿದ್ದಕ್ಕೆ ದುರಂತ ಸ್ವಲ್ಪದರಲ್ಲೇ ತಪ್ಪಿತು. ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುಮಾರು 4 ಗಂಟೆ ಕಾಲ ಚಕ್ಕರ್ ಹೊಡೆದ  ವಿಮಾನವನ್ನು ಕೊನೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲೆಟ್ ಹರಸಾಹಸಪಟ್ಟು ಸೇಫ್ ಆಗಿ ಲ್ಯಾಂಡ್ ಮಾಡಿದ್ದಾರೆ. ಇದಕ್ಕೆ ಪ್ರಯಾಣಿಕರು ಪೈಲೆಟ್ ಸಾಹಸವನ್ನು ಕೊಂಡಾಡಿದ್ದಾರೆ. ಅಂತಹ ಭಯಾನಕ ಸನ್ನಿವೇಶದಲ್ಲೂ ಅವರು ತಾಳ್ಮೆ ಕಳೆದುಕೊಳ್ಳದೇ ಪ್ರಯಾಣಿಕರ ಜೀವ ರಕ್ಷಿಸಿದ್ದರು. ಪ್ರಯಾಣಿಕರು ಮಾತ್ರವಲ್ಲ, ಫ್ಲೈಟ್ ಅಟೆಂಡೆಂಟ್ ಗಳೂ ಅತ್ತು ಕಣ್ಣು ಕೆಂಪಾಗಿಸಿದ್ದರು. ವಿಮಾನದಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿ ಇಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

pic.twitter.com/J2unYCxq2h

 

— News Leader (@NewsLeaderLive) April 20, 2026

Share this Story:

Follow Webdunia kannada

ಮುಂದಿನ ಸುದ್ದಿ

ಜನಗಣತಿ ಬಳಿಕ ಬೇಕಿದ್ದರೆ ಕ್ಷೇತ್ರ ಮರುವಿಂಗಡಣೆ ಮಾಡಲಿ: ಸಿಎಂ ಸಿದ್ದರಾಮಯ್ಯ