Publish Date: Thu, 23 Apr 2026 (12:21 IST)
Updated Date: Thu, 23 Apr 2026 (12:23 IST)
ಬೆಂಗಳೂರು: ಈ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಶೇ. ರಷ್ಟು ಫಲಿತಾಂಶ ಬಂದಿದೆ. ಇನ್ನು ಅನುತ್ತೀರ್ಣರಾದವರಿಗೆ ಇನ್ನು ಎರಡು ಅವಕಾಶವಿದ್ದು ಭಯ ಬೇಡ.
ನೇರವಾಗಿ ವೆಬ್ ಸೈಟ್ ಮುಖಾಂತರವೇ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಒಟ್ಟು ಮೂವರಿಗೆ 625 ಕ್ಕೆ 625 ಅಂಕಗಳು ಬಂದಿವೆ. ಹಾಸನದ ಜಾನವಿ, ಉತ್ಸವ ಪಾಟೀಲ್, ಬೆಳಗಾವಿ ರೂಪಾ ಚನಗೌಡ ಪಾಟೀಲ 625 ಅಂಕ ಪಡೆದ ವಿದ್ಯಾರ್ಥಿಗಳು.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಘೋಷಣೆ ಮಾಡಿದ್ದಾರೆ. ಈ ಬಾರಿ ದಾಖಲೆಯ 94.1 ಶೇ. ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳು, ಸಹಕಾರ ನೀಡಿದ ಪೋಷಕರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಡಿಜಿ ಲಾಕರ್ ನಲ್ಲಿ ಅಂಕಪಟ್ಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 7,75,999 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಶೇ.99 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 7,24,794 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನದಲ್ಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ