Select Your Language

Notifications

webdunia
webdunia
webdunia
webdunia

ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ

Spit water from mouth and iron clothes
bangalore , ಭಾನುವಾರ, 10 ಜುಲೈ 2022 (20:29 IST)
ಸಾಮಾನ್ಯವಾಗಿ ಕಬ್ಬಿಣದ ಇಸ್ತ್ರಿ ಪೆಟ್ಟಿಗೆಯಿಂದ ಇಸ್ತ್ರಿ ಮಾಡುವಾಗ ಬಟ್ಟೆಯ ಮೇಲೆ ನೀರನ್ನು ಸಿಂಪಡಿಸಿ ಇಸ್ತ್ರಿ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ವ್ಯಕ್ತಿಯೋರ್ವ ಬಟ್ಟೆಯ ಮೇಲೆ ನೀರನ್ನು ಉಗುಳಿ ವಿಭಿನ್ನವಾಗಿ ಇಸ್ತ್ರಿ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ವಯಸ್ಸಾದ ವ್ಯಕ್ತಿಯೊರ್ವ ಬಟ್ಟೆ ಇಸ್ತ್ರಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇಸ್ತ್ರಿ ಮಾಡುವ ಮುನ್ನ ಕೈಯಲ್ಲಿ ನೀರು ತುಂಬಿದ ಬಟ್ಟಲು ಹಿಡಿದುಕೊಂಡು, ನೀರನ್ನು ಕುಡಿದು ನಂತರ ಬಾಯಿಯೊಳಗಿದ್ದ ನೀರನ್ನು ಮತ್ತೆ ಬಟ್ಟೆಯ ಮೇಲೆ ಉಗುಳಿ ಇಸ್ತ್ರಿ ಮಾಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ 30 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.ವ್ಯಕ್ತಿಯ ಈ ಕೃತ್ಯಕ್ಕೆ ಜನ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು