Select Your Language

Notifications

webdunia
webdunia
webdunia
webdunia

ಪೂರ್ವ ವಿಭಾಗದ ಪೊಲೀಸರಿಂದ ಸ್ಪೆಷಲ್ ಡ್ರೈವ್

Special drive by East division police
bangalore , ಶನಿವಾರ, 27 ಮೇ 2023 (21:30 IST)
ಶಾಲಾ ಕಾಲೇಜು ಪ್ರಾರಂಭ ಹಿನ್ನೆಲೆ‌ಪೂರ್ವ ವಿಭಾಗದ ಗುಟ್ಕಾ, ಸಿಗರೇಟು ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.ಪೂರ್ವ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗ್ತಿದೆ.
 
ಶಾಲಾ-ಕಾಲೇಜಿನ ನೂರು ಮೀಟರ್ ಅಂತರದಲ್ಲಿರೋ ಎಲ್ಲಾ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡರಸಲಾಗ್ತಿದೆ.ಡ್ರಗ್ ಹಾಗೂ ಗಾಂಜಾ ಮಾರಾಟ ಮಾಡೋ ಮಾಹಿತಿ ಹಿನ್ನೆಲೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ವಿಶೇಷ ತಂಡ ರಚನೆ ಮಾಡಿ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ.105ಕಡೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.ದಾಳಿ ವೇಳೆ ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸ್ತಿದ್ದ ವ್ಯಕ್ತಿಗಳು ಪತ್ತೆಯಾಗಿದ್ದಾರೆ.ಇಬ್ಬರು ಗಾಂಜಾ ವ್ಯಸನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಸದ್ಯ ದಾಳಿ ನಡೆಸಿ ಗುಟ್ಕಾ, ಸಿಗರೇಟ್ ಅಂಗಡಿಯವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಮಾದಕ ವಸ್ತು ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ ಬಿ.ಕೆ.ಹರಿಪ್ರಸಾದ್