Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ ಬಿ.ಕೆ.ಹರಿಪ್ರಸಾದ್

ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ ಬಿ.ಕೆ.ಹರಿಪ್ರಸಾದ್
bangalore , ಶನಿವಾರ, 27 ಮೇ 2023 (21:16 IST)
ಬಿಜೆಪಿಯವರು 36 ಪರ್ಸಂಟೇಜ್ ಓಟ್ ಇಟ್ಕೊಂಡಿದಾರೆ.ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ,ಪರಮೇಶ್ವರ್, ಮುನಿಯಪ್ಪ,ಕಾಂಬಿನೇಷನ್ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ ನಲ್ಲಿ ಸಿಎಂ ಆಗ್ತಾರೆ ಎಂದು  ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಕಡೆ ಬಂತು. ಜೆಡಿಎಸ್‌ನ ಮತಗಳೆಲ್ಲ ಕಾಂಗ್ರೆಸ್‌ ಕಡೆ ಬಂತು.ಇದರಿಂದ ಅವರ ಓಟು ಕುಸಿದಿದೆ. ನಾವು ತೆಗೆದುಕೊಂಡ ಓಟು ನೋಡಿದಾಗ.ಒಕ್ಕಲಿಗ ಸಮುದಾಯದ ನಾಯಕತ್ವ ನಮಗೆ ಇರಲಿಲ್ಲ, ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಮಾಡಿದಾಗ, ಅವರು ಸಿಎಂ ಆಗ್ತಾರೆ ಎಂದಾಗ ಒಕ್ಕಲಿಗ ಓಟ್ ಕಾಂಗ್ರೆಸ್‌ ಗೆ ಬಂದಿದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
 
ಅಲ್ಲದೇ ಈ ವೇಳೆ ಗ್ಯಾರಂಟಿಗಳ ಬಗ್ಗೆ ಕುಮಾರ ಸ್ವಾಮಿ ಲೇವಡಿ ವಿಚಾರಕ್ಕೆ ಬಿಕೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.ಗ್ಯಾರಂಟಿಗಳ ಬಗ್ಗೆ ಅಂಕಿಅಂಶ ಸಂಗ್ರಹಿಸುತ್ತಿದ್ದಾರೆ. ಸರ್ಕಾರದ ನೀತಿ ನಿಯಮದ  ಏನು ಮಾಡಬೇಕೆಂದು ಸಮಯ ತೆಗೆದುಕೊಳ್ಳುತ್ತಿದ್ದಾರೆ.ಅದು ಬಂದ ನಂತರ ಗ್ಯಾರಂಟಿ ಖಂಡಿತ ಜಾರಿಯಾಗುತ್ತೆ ಎಂದು ಹೇಳಿದ್ರು.ಇನ್ನೂ ಲೋಕಸಭೆ ಬಳಿಕ ಸರ್ಕಾರ ಪತನವಾಗುತ್ತೆ ಎಂಬ ಎಚ್ಡಿಕೆ ಹೇಳಿಕೆ ವಿಚಾರಕ್ಕೆ ಹಗಲು ಗನಸನ್ನ ಕುಮಾರ ಸ್ವಾಮಿಯವರು ಕಾಣ್ತಿದಾರೆ, ಇಷ್ಟು ದಿನ ರಾತ್ರಿ ಹಗಲು ನಿದ್ದೆ ಇರ್ತಿರಲಿಲ್ಲ.ಈಗ ಹಗಲು ರಾತ್ರಿ ನಿದ್ದೆ ಮಾಡ್ತಿದಾರೆ. ಹೀಗಾಗಿ ಕನಸು ಕಾಣ್ತಿದಾರೆ ಎಂದು ಬಿ ಕೆ ಹರಿಪ್ರಸಾದ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಹೆಚ್ಚಾಯ್ತು ಬೀದಿನಾಯಿಗಳ ಹಾವಳಿ