Publish Date: Sat, 27 May 2023 (09:20 IST)
Updated Date: Sat, 27 May 2023 (09:33 IST)
ಮುಂಬೈ: ಕಿಂಗ್ ಕೊಹ್ಲಿ ಮೈದಾನದಲ್ಲಿ ಎದುರಾಳಿಗಳನ್ನು ಸ್ಲೆಡ್ಜ್ ಮಾಡುವುದರಲ್ಲಿ ಫೇಮಸ್. ಅವರನ್ನು ಕೆಣಕಲು ಬಂದವರನ್ನೂ ಸುಮ್ಮನೇ ಬಿಡುವವರಲ್ಲ. ಆದರೆ ಈಗ ಕೊಹ್ಲಿಯನ್ನೇ ಅನುಷ್ಕಾ ಸ್ಲೆಡ್ಜ್ ಮಾಡಿದ್ದಾರೆ.
ಪ್ಯೂಮಾ ಇಂಡಿಯಾದ ಸಂದರ್ಶನವೊಂದರಲ್ಲಿ ಅನುಷ್ಕಾ, ವಿರಾಟ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರಿಗೂ ಹಲವು ಸ್ವಾರಸ್ಯಕರ ಪ್ರಶ್ನೆ, ಟಾಸ್ಕ್ ನೀಡಲಾಯಿತು. ಅದರಂತೆ ನಿರೂಪಕರು ವಿರಾಟ್ ಬ್ಯಾಟಿಂಗ್ ಮಾಡುತ್ತಾರೆ, ನೀವು ಸ್ಲೆಡ್ಜಿಂಗ್ ಮಾಡಬೇಕು ಎಂದು ಟಾಸ್ಕ್ ಕೊಟ್ಟರು.
ಅದರಂತೆ ಅನುಷ್ಕಾ ವಿರಾಟ್ ಹಿಂದೆ ಕೀಪರ್ ಆಗಿ ನಿಂತು ಈವತ್ತು ಏಪ್ರಿಲ್ 24 ಕನಿಷ್ಠ ಪಕ್ಷ ಈವತ್ತಾದ್ರೂ ರನ್ ಗಳಿಸಿ ಎಂದು ಕಾಲೆಳೆಯುತ್ತಾರೆ. ಅನುಷ್ಕಾ ಸ್ಲೆಡ್ಜ್ ಗೆ ಸ್ವತಃ ವಿರಾಟ್ ಬೌಲ್ಡ್ ಆಗುತ್ತಾರೆ. ಬಳಿಕ ಅನುಷ್ಕಾ ವಿಕೆಟ್ ಬಿದ್ದಾಗ ವಿರಾಟ್ ಸಂಭ್ರಮಿಸುವುದನ್ನು ಅನುಕರಿಸಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಈ ಸಂದರ್ಶನದಲ್ಲಿ ಅನುಷ್ಕಾ-ವಿರಾಟ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಮಾಹಿತಿ ಹೊರಹಾಕಿದ್ದಾರೆ. ನಿಮ್ಮ ಫೋನ್ ನಲ್ಲಿ ವಿರಾಟ್ ನಂಬರ್ ಏನೆಂದು ಸೇವ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಪತಿ ಪರಮೇಶ್ವರ್ ಎಂದು ನಾಚಿಕೊಳ್ಳುತ್ತಾರೆ ಅನುಷ್ಕಾ. ಈ ವಿಡಿಯೋಗಳು ಈಗ ವೈರಲ್ ಆಗಿವೆ.