Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಪಾಳಯದಲ್ಲಿ ಇಂಗ್ಲೆಂಡ್ ವೇಗಿ ಆಂಡರ್ಸನ್?! ಫೋಟೋ ರಹಸ್ಯವೇನು?

ಟೀಂ ಇಂಡಿಯಾ ಪಾಳಯದಲ್ಲಿ ಇಂಗ್ಲೆಂಡ್ ವೇಗಿ ಆಂಡರ್ಸನ್?! ಫೋಟೋ ರಹಸ್ಯವೇನು?
ದಿ ಓವಲ್ , ಶನಿವಾರ, 27 ಮೇ 2023 (08:50 IST)
Photo Courtesy: Twitter
ದಿ ಓವಲ್: ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡಲು ಇಂಗ್ಲೆಂಡ್ ಗೆ ತೆರಳಿರುವ ಟೀಂ ಇಂಡಿಯಾದ ಕೆಲವು ಸದಸ್ಯರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

ವೇಗಿ ಉಮೇಶ್ ಯಾದವ್, ಶ್ರಾದ್ಧೂಲ್ ಠಾಕೂರ್, ಸ್ಪಿನ್ನರ್ ಅಕ್ಸರ್ ಪಟೇಲ್ ಸೇರಿದಂತೆ ಕೆಲವು ಆಟಗಾರರು ಇಂಗ್ಲೆಂಡ್ ನಲ್ಲಿದ್ದಾರೆ. ಇವರು ಅಭ್ಯಾಸ ನಡೆಸಿದ ಕ್ಷಣದ ಫೋಟೋಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿತ್ತು.

ಆದರೆ ಈ ಫೋಟೋದಲ್ಲಿ ಆಟಗಾರರ ಜೊತೆಗಿರುವ ವ್ಯಕ್ತಿಯನ್ನು ನೋಡಿದರೆ ಥೇಟ್ ಇಂಗ್ಲೆಂಡ್ ಸ್ಟಾರ್ ವೇಗಿ ಜೇಮ್ಸ್ ಆಂಡರ್ಸನ್ ರೀತಿಯೇ ಕಾಣುತ್ತಿದ್ದಾರೆ. ಇವರನ್ನು ನೋಡಿದ ನೆಟ್ಟಿಗರು ಆಸೀಸ್ ಸೋಲಿಸಲು ಭಾರತಕ್ಕೆ ಸಹಾಯ ಮಾಡಲು ಇಂಗ್ಲೆಂಡ್ ಸ್ಟಾರ್ ವೇಗಿ ಬಂದ್ರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಇದು ಆಂಡರ್ಸನ್ ಅಲ್ಲ. ಆದರೆ ಫೋಟೋದಲ್ಲಿದ್ದ ವ್ಯಕ್ತಿಗೆ ಆಂಡರ್ಸನ್ ಹೋಲಿಕೆಯಿರುವುದು ಈ ಕನ್ ಫ್ಯೂಸ್ ಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ರೋಹಿತ್ ಶರ್ಮಾ, ಇಶಾನ್ ಕಿಶನ್ ಗೆ ಗಾಯ