Publish Date: Mon, 25 Mar 2019 (18:51 IST)
Updated Date: Mon, 25 Mar 2019 (18:52 IST)
ಬಿಜೆಪಿ ವತಿಯಿಂದ 'ಮೈ ಭೀ ಚೌಕೀದಾರ್ ಅಭಿಯಾನ' ಬಿಸಿಲೂರಿನಲ್ಲಿ ನಡೆಯಿತು.
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಪಾದಯಾತ್ರೆ
ನಡೆಸಿದ ಬಿಜೆಪಿ ಕಾರ್ಯಕರ್ತರು 'ಜಾಧವ್ ತುಮ್ ಆಗೇ ಬಡೋ ಹಮ್ ತುಮ್ಹಾರೇ ಸಾಥ್ ಹೈ' ಎಂದು ಘೋಷಣೆ ಕೂಗಿದ್ರು.
'ಚೌಕೀದಾರ್ ಶೇರ್ ಹೈ... ರಾಹುಲ್ ಗಾಂಧಿ ಚೋರ್ ಹೈ' ಎಂದು ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಡಾ.ಎ.ಬಿ.ಮಾಲಕರೆಡ್ಡಿ, ಶಾಸಕ ಬಸವರಾಜ್ ಮತ್ತಿಮೂಡ್, ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಹಲವರು ಇದ್ರು. ಬಿಜೆಪಿ ಧ್ವಜ ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಮಾತನಾಡಿ, ಮೋದಿ ಗುಣಗಾನ ಮಾಡಿದ್ರು.
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವ ಸೀರೆ ತೊಟ್ಟು ಮೈ ಭೀ ಚೌಕಿದಾರ್ ಅಭಿಯಾನದಲ್ಲಿ ಭಾಗಿಯಾದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಪರ ಘೋಷಣೆ ಕೂಗಿದ್ರು.