Select Your Language

Notifications

webdunia
webdunia
webdunia
webdunia

ಬಾಡಿಗೆ ಬಾಕಿ ಉಳಿಸಿಕೊಂಡ ಸೋನಿಯಾ ಗಾಂಧಿ

ಬಾಡಿಗೆ ಬಾಕಿ ಉಳಿಸಿಕೊಂಡ ಸೋನಿಯಾ ಗಾಂಧಿ
ಬೆಂಗಳೂರು , ಗುರುವಾರ, 10 ಫೆಬ್ರವರಿ 2022 (14:28 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನೆಯ ಬಾಡಿಗೆ ಸೇರಿದಂತೆ ಕಾಂಗ್ರೆಸ್ ಸುಪರ್ದಿಯಲ್ಲಿರುವ ಹಲವು ಕಟ್ಟಡಗಳ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ.
 
ಆರ್ ಟಿಐ ನಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಈ ವಿಷಯ ತಿಳಿಸಿದೆ. ರಾಜಧಾನಿ ದೆಹಲಿಯ ಪ್ರತಿಷ್ಠಿತ ಜನ್ ಪಥ್ ನ 10ನೇ ರಸ್ತೆಯಲ್ಲಿರುವ ನಿವಾಸದ ಬಾಡಿಗೆಯಲ್ಲಿ 5610 ರೂ.ವನ್ನು ಸೋನಿಯಾ ಗಾಂಧಿ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ.
ಮನೆಯ ಬಾಡಿಗೆಯನ್ನು ಕೊನೆಯ ಬಾರಿಗೆ ಪಾವತಿಸಿದ್ದು 2020 ಸೆಪ್ಟೆಂಬರ್ ನಲ್ಲಿ.
 
ಅಖ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯ ಬಾಡಿಗೆ 12,69,902ರೂ ಬಾಕಿ ಉಳಿಸಿಕೊಂಡಿದ್ದು, 2012 ಡಿಸೆಂಬರ್ ನಲ್ಲಿ ಕೊನೆಯ ಬಾರಿಗೆ ಪಾವತಿಸಲಾಗಿದೆ.
 
ಸೋನಿಯಾ ಗಾಂಧಿ ಅವರ ಪರ್ಸನಲ್ ಸೆಕ್ರೆಟರಿ ವಿನ್ಸೆಂಟ್ ಜಾರ್ಜ್ ಉಳಿದುಕೊಂಡಿರುವ ಚಾಣಕ್ಯಪುರಿಯಲ್ಲಿರುವ ಬಂಗಲೆಯ ಬಾಡಿಗೆ 5,07,911 ರೂ. ಬಾಕಿ ಉಳಿಸಿಕೊಳ್ಳಲಾಗಿದೆ. 2013 ಆಗಸ್ಟ್ ನಂತರ ಬಾಡಿಗೆಯನ್ನೇ ಪಾವತಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಬ್‌ ವಿವಾದ : ಮಹತ್ವದ ಆದೇಶ ನೀಡಿದ ಹೈಕೋರ್ಟ್‌?