Publish Date: Mon, 06 Nov 2023 (10:50 IST)
Updated Date: Mon, 06 Nov 2023 (11:09 IST)
ರಾಯಚೂರು: ತಾಯಿಗೆ ನಿತ್ಯ ಮದ್ಯಸೇವಿಸಿ ಕಿರುಕುಳ ನೀಡುತ್ತಿದ್ದ ತಂದೆಯನ್ನೇ ತಲೆ ಮೇಲೆ ಕಲ್ಲೆತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ತಂದೆ ನಿತ್ಯ ಗಾಂಜಾ, ಮದ್ಯ ಸೇವಿಸಿ ತಾಯಿಯ ಬಳಿ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಮಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ತಾನೇ ಮಾಹಿತಿ ನೀಡಿದ್ದಾನೆ.
ನಿತ್ಯ ತಾಯಿಗೆ ಕಿರುಕುಳ ನೀಡುವುದನ್ನು ನೋಡಿ ಸಾಕಾಗಿತ್ತು. ಇದನ್ನು ಸಹಿಸಲಾಗದೇ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ. ಆದರೆ ಮೊದಲು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾನೆ. ಆದರೆ ನಂತರ ತಾನೇ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.