Select Your Language

Notifications

webdunia
webdunia
webdunia
webdunia

ಬುದ್ಧಿಮಾತು ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿಮಗ

webdunia
ಸೋಮವಾರ, 18 ಫೆಬ್ರವರಿ 2019 (07:05 IST)
ಚಿಕ್ಕಮಗಳೂರು : ಬುದ್ಧಿಮಾತು ಹೇಳಿದ್ದಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹೊಕಳಿ ಗ್ರಾಮದಲ್ಲಿ ನಡೆದಿದೆ.


ಸಾಕಮ್ಮ(55) ಕೊಲೆಯಾದ ಮಹಿಳೆ. ನಂದೀಶ್ ತಾಯಿಯನ್ನು ಕೊಂದ ಮಗ. ಈತನಿಗೆ ತಾಯಿ ಮನೆಯಲ್ಲಿ ಇರಬೇಡ. ಕೆಲಸಕ್ಕೆ ಹೋಗಿ ದುಡಿಯುವಂತೆ ಬುದ್ಧಿವಾದ ಹೇಳಿದ್ದಾಳೆ. ತಾಯಿ ಹಾಗೇ ಹೇಳಿದ್ದಕ್ಕೆ ಕೋಪಗೊಂಡ ಮಗ ನಂದೀಶ್ ದೊಣ್ಣೆಯಿಂದ ತಾಯಿಗೆ ಹೊಡೆದಿದ್ದಾನೆ.


ತೀವ್ರ ರಕ್ತಸ್ರಾವದಿಂದ ತಾಯಿ ಸಾಕಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಶೃಂಗೇರಿ ಠಾಣಾ ಪೊಲೀಸರು ಆರೋಪಿ ನಂದೀಶನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪಬ್ ಜಿ ಆಟದ ಹುಚ್ಚುಗೆ ಪತ್ನಿಯ ತಮ್ಮನಿಗೆ ಚಾಕುವಿನಿಂದ ಇರಿದ ವ್ಯಕ್ತಿ