Publish Date: Tue, 27 Dec 2022 (16:56 IST)
Updated Date: Tue, 27 Dec 2022 (16:59 IST)
ಹಾಸನದ ಕೊರಿಯರ್ ಆಫೀಸ್ನಲ್ಲಿ ಮಿಕ್ಸಿ ಸ್ಪೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಾಸನದ ಕೊರಿಯರ್ ಆಫೀಸ್ನಲ್ಲಿ ಮಿಕ್ಸಿ ಅನುಮಾನಾಸ್ಪದವಾಗಿ ಸ್ಫೋಟಗೊಂಡಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಂಭೀರವಾಗಿ ಗಾಯಗೊಂಡ ಮಾಲೀಕ ಶಶಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.. ಎರಡು ದಿನಗಳ ಹಿಂದೆ ಕೊರಿಯರ್ ಆಫೀಸ್ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ಹೋಮ್ ಡೆಲಿವರಿ ಮಾಡಿದ್ದರು. ಆದರೆ ಮಿಕ್ಸಿಗೆ ನಾನು ಆರ್ಡರ್ ಮಾಡಿಲ್ಲ ಎಂದು ಕೊರಿಯರ್ ಆಫೀಸ್ಗೆ ಆ ವ್ಯಕ್ತಿ ವಾಪಸ್ ನೀಡಿದ್ದಾನೆ. ವಾಪಸ್ ಪಡೆಯುವ ವೇಳೆ ಮಿಕ್ಸಿ ಆನ್ ಮಾಡಿ ಪರಿಶೀಲಿಸಿದಾಗ ಮಿಕ್ಸಿ ಬ್ಲಾಸ್ಟ್ ಆಗಿದೆ. ಇನ್ನು ಸ್ಪೋಟದ ಸ್ಥಳದಲ್ಲಿ ಕೆಲ ವಸ್ತುಗಳನ್ನು ಸಂಗ್ರಹಿಸಲಾಗಿದೆ.